-->

ಟ್ರೇಡಿಂಗ್ App ನಂಬಿ ಅರ್ಧ ಕೋಟಿ ರೂ ಕಳೆದುಕೊಂಡ ಉಡುಪಿ‌ ಮಹಿಳೆ

ಟ್ರೇಡಿಂಗ್ App ನಂಬಿ ಅರ್ಧ ಕೋಟಿ ರೂ ಕಳೆದುಕೊಂಡ ಉಡುಪಿ‌ ಮಹಿಳೆಉಡುಪಿ-ಟ್ರೇಡಿಂಗ್ ಆ್ಯಪ್ ನಂಬಿ‌ ಅರ್ಧ ಕೋಟಿ ಹಣವನ್ನು ಉಡುಪಿಯ ಮಹಿಳೆಯೋರ್ವರು‌ ಕಳೆದುಕೊಂಡಿದ್ದಾರೆ.


ಉಡುಪಿಯ ಮಹಿಳೆಗೆ ಟೆಲಿಗ್ರಾಮ್ ಮತ್ತು ವಾಟ್ಸ್ ಅಪ್ ನಲ್ಲಿ Tiger Global Trade mobile app ಕಂಪೆನಿ ಎಂಬುದಾಗಿ ಯಾರೋ ಅಪರಿಚಿತರು ಸಂಪರ್ಕಿಸಿದ್ದರು. TR Trade ನ Share market ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುವುದಾಗಿಯೂ ಮತ್ತು ಲಾಭಾಂಶದ ಹಣವನ್ನು ಕೇವಲ 48-72 ಗಂಟೆಗಳಲ್ಲಿ ಹಿಂಪಡೆಯಬಹುದು ಎಂಬುದಾಗಿ ನಂಬಿಸಿದ್ದರು.  ಆರೋಪಿಗಳ ಟೆಲಿಗ್ರಾಮ್ ಗ್ರೂಪ್ ಮತ್ತು ವಾಟ್ಸ್ ಗ್ರೂಪ್ ಗೆ ಲಿಂಕ್ ಮುಖೇನ ಸೇರಿಸಿಕೊಂಡು, ಹಣ ತೊಡಗಿಸುವಂತೆ ತಿಳಿಸಿದ್ದು, ಇದನ್ನು ನಂಬಿದ ಮಹಿಳೆ ದಿನಾಂಕ 16.11.2023 ರಿಂದ 13.12.2023 ರ ಮದ್ಯಾವದಿಯಲ್ಲಿ ಹಂತ ಹಂತವಾಗಿ UPI, IMPS ಹಾಗೂ ಆನ್‌‌ಲೈನ್ ಟ್ರಾನ್ಸೆಕ್ಷನ್ ಮುಖೇನ ಒಟ್ಟು ರೂ. 51,90,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ.


 ಯಾರೋ ಆರೋಪಿಗಳು ಮಹಿಳೆಯನ್ನು Tiger Global Trade mobile app ಕಂಪೆನಿ ಎಂಬುದಾಗಿ ನಂಬಿಸಿ, ಒಟ್ಟು ರೂ. 51,90,000/- ಹಣವನ್ನು ಪಡೆದು, ಶೇರ್ ನ ಲಾಭಾಂಶವನ್ನು ನೀಡದೇ ಪಡೆದ ಹಣವನ್ನು ನೀಡದೇ ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ಉಡುಪಿ ಸೆನ್‌  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 144/2023  ಕಲಂ: 66(C), 66(D), ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article