ಬಸ್ ನಲ್ಲಿ‌ ಅಜ್ಜನಿಗೆ ನಿದ್ದೆ- ತಪ್ಪಿಸಿಕೊಂಡ 3 ವರ್ಷದ ಮಗು



ಚಿಕ್ಕಮಗಳೂರು: ಅಜ್ಜನ ನಿರ್ಲಕ್ಷ್ಯದಿಂದಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂರು ವರ್ಷದ ಮಗು ತಪ್ಪಿಸಿಕೊಂಡು ಹೋದ ಘಟನೆ ಬುಧವಾರ ತರೀಕೆರೆ ತಾಲೂಕಿನಲ್ಲಿ ನಡೆದಿದೆ. 


 ಪೊಲೀಸರು ಹಾಗೂ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹೆತ್ತವರು ಮಡಿಲು ಮಗು ಸೇರಿದೆ. ಬುಧವಾರ ಬೆಳಗ್ಗೆ 3 ವರ್ಷದ ಶ್ರೇಯಸ್ ತನ್ನ ಅಜ್ಜನೊಂದಿಗೆ ತರೀಕೆರೆ ಬಸ್ ನಿಲ್ದಾಣದಲ್ಲಿ ತಾಲೂಕಿನ ತಣಿಗೆಬೈಲು ಗ್ರಾಮಕ್ಕೆ ವೇಳೆ  ತೆರಳಲು ಬಸ್ ಹತ್ತಿದೆ. 


ಈ ವೇಳೆ ಅಜ್ಜ ನಿದ್ರೆಗೆ ಜಾರಿದ್ದು, ಬಸ್‌ನಿಂದ ಇಳಿದ ಮಗು ಬೇರೊಂದು ಬಸ್ಸನ್ನು ಹತ್ತಿದೆ. ಬಸ್‌ನಲ್ಲಿ ಅಜ್ಜನನ್ನು ಕಾಣದೇ

ಮಗು ಅಳಲಾರಂಭಿಸಿದ್ದು, ಈ ವೇಳೆ ಅದೇ ಬಸ್‌ನಲ್ಲಿದ್ದ ಇಮ್ರಾನ್ ಮತ್ತಿತರರು ಮಗುವನ್ನು ನಗರದ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.


ಪೊಲೀಸರು ಹಾಗೂ ಸಾರ್ವಜನಿಕರು ಮಗುವಿನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಪೋಷಕರ ಪತ್ತೆಗೆ ಮನವಿ ಮಾಡಿದ್ದಾರೆ. ವಿಷಯ

ತಿಳಿದು ಹೆತ್ತವರು ಠಾಣೆಗೆ ಆಗಮಿಸಿ ಮಗುವನ್ನು ಕರೆದೊಯ್ದಿದ್ದಾರೆ.