-->

ತನಗಿಂತ 22ವರ್ಷ ಕಿರಿಯಳಾದ ಮೇಕಪ್ ಆರ್ಟಿಸ್ಟ್ ಅನ್ನು ವಿವಾಹವಾದ ಅರ್ಬಾಜ್ ಖಾನ್: ಶುಭ ಕೋರಿದ ಅರ್ಹಾನ್ ಖಾನ್

ತನಗಿಂತ 22ವರ್ಷ ಕಿರಿಯಳಾದ ಮೇಕಪ್ ಆರ್ಟಿಸ್ಟ್ ಅನ್ನು ವಿವಾಹವಾದ ಅರ್ಬಾಜ್ ಖಾನ್: ಶುಭ ಕೋರಿದ ಅರ್ಹಾನ್ ಖಾನ್


ಮುಂಬೈ: ಬಾಲಿವುಡ್​​ ಸ್ಟಾರ್ ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಡಿಸೆಂಬರ್ 24ರಂದು ರಾತ್ರಿ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ. ಅರ್ಬಾಜ್​ ಖಾನ್ ಅವರ ಪುತ್ರ ಅರ್ಹಾನ್​ ಖಾನ್​ ಮದುವೆಗೆ ಆಗಮಿಸಿ ಶುಭಕೋರಿದ್ದು ಎಲ್ಲರ ಗಮನ ಸೆಳೆಯಿತು.

ಮುಂಬೈನಲ್ಲಿರುವ ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಈ ಮದುವೆ ಸಮಾರಂಭ ಬಹಳ ಸರಳವಾಗಿ ನಡೆದಿದೆ. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ನಡುವೆ ಅರ್ಬಾಜ್​ ಖಾನ್ ಮತ್ತು ಶುರಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅರ್ಬಾಜ್​ ಹೆತ್ತವರಾದ ಸಲೀಂ ಖಾನ್​ ಮತ್ತು ಸುಶೀಲಾ ಚರಕ ಮತ್ತು ಸಹೋದರ ಸಲ್ಮಾನ್​ ಖಾನ್​ ಕೂಡ ಉಪಸ್ಥಿತರಿದ್ದರು. ಅಲ್ವಿರಾ ಖಾನ್ ಅಗ್ನಿಹೋತ್ರಿ, ಪತಿ ಅತುಲ್ ಅಗ್ನಿಹೋತ್ರಿ, ಸಲ್ಮಾನ್ ಖಾನ್ ಅವರ ರೂಮರ್ಡ್​ ಗರ್ಲ್​ಫ್ರೆಂಡ್​ ಯುಲಿಯಾ ವಂಟೂರ್, ರವಿನಾ ಟಂಡನ್​ ಮತ್ತು ಅವರ ಪುತ್ರಿ ರಾಶಾ ಕೂಡ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು.

ಹೊಸ ಸಿನಿಮಾ ‘ಪಟ್ನಾ ಶುಕ್ಲಾ’ ಸೆಟ್‌ನಲ್ಲಿ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಭೇಟಿಯಾಗಿದ್ದಾರೆ. ಅರ್ಬಾಜ್​ ಖಾನ್ ಅವರು 1998ರಲ್ಲಿ ನಟಿ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು. ಆದರೆ ಈ ಜೋಡಿ 2016ರ ಮಾರ್ಚ್​ ತಿಂಗಳಲ್ಲಿ ತಾವು ಬೇರೆ ಬೇರೆಯಾಗುತ್ತಿರುವುದಾಗಿ ಘೋಷಿಸಿತ್ತು. ವಿವಾಹವಾದ 19 ವರ್ಷಗಳ ಬಳಿಕ ಅಂದರೆ 2017, ಮೇ 11ರಂದು ಅಧಿಕೃತವಾಗಿ ಡಿವೋರ್ಸ್​ ಆದರು. ಮಲೈಕಾಳೊಂದಿಗೆ ಸಂಬಂಧ ಮುರಿದುಬಿದ್ದ ಬಳಿಕ, ಅರ್ಬಾಜ್ ಖಾನ್ ನಟಿ ಮತ್ತು ರೂಪದರ್ಶಿ ಜಾರ್ಜಿಯಾ ಆಂಡ್ರಿಯಾರೊಂದಿಗೆ ದೀರ್ಘಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಆದರೆ ಇಬ್ಬರೂ ಬೇರ್ಪಟ್ಟರು. ಇದಾದ ಬಳಿಕ ಒಂಟಿಯಾಗಿದ್ದ ಅರ್ಬಾಜ್ ಅವರು ಇದೀಗ ಮತ್ತೆ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಶುರಾ ಖಾನ್​ ಬಗ್ಗೆ ಹೇಳುವುದಾದರೆ, ಬಾಲಿವುಡ್ ಮೇಕಪ್ ಕಲಾವಿದೆಯಾಗಿರುವ ಶುರಾ, ನಟಿ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥಡಾನಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅರ್ಬಾಜ್​ ಮತ್ತು ಶುರಾ ನಡುವೆ 22 ವರ್ಷಗಳ ಅಂತರವಿದೆ. ಶುರಾ ಖಾನ್ ಈ ಹಿಂದೆ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥಡಾನಿ ಅವರೊಂದಿಗೆ ಕೆಲಸ ಮಾಡಿದ್ದರು. ‘ಪಟ್ನಾ ಶುಕ್ಲಾ’ ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿದ್ದರಂತೆ. ಈ ವೇಳೆಯ ಪರಿಯಚ ಇದೀಗ ಮದುವೆ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನಲಾಗಿದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article