ಹರಾರೆ: ಆಫ್ರಿಕಾ ಖಂಡದ ಜಿಂಬಾಬೈಯಲ್ಲಿ ಬರಗಾಲದ
ತೀವ್ರತೆಯಿಂದ 200 ಆನೆಗಳು ಸಾವನ್ನಪ್ಪಿದೆ.
ತೀವ್ರ ಬರಗಾಲದಿಂದ ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೇ ಇವುಗಳು ಅಸುನೀಗಿವೆ. ಅತೀದೊಡ್ಡ ರಾಷ್ಟ್ರೀಯ ಉದ್ಯಾನವನ ಹ್ವಾಂಗೇಯಲ್ಲಿ ಈ ದುರಂತ ಸಂಭವಿಸಿದೆ.
45 ಸಾವಿರ ಆನೆಗಳು, 100ಕ್ಕೂ ಅಧಿಕ ಸಸ್ತನಿಗಳು, 400ಕ್ಕೂ ಅಧಿಕ ಪಕ್ಷಿ ಪ್ರಭೇದಗಳು ಇಲ್ಲಿವೆ. ಮುಂದಿನ ದಿನಗಳಲ್ಲಿ ಪ್ರಾಣಿಗಳ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಸಾಧಾರಾಣ ವಯಸ್ಸಿನ ಆನೆಗೆ ಪ್ರತೀ ದಿನಕ್ಕೆ 200 ಲೀಟರ್ ನೀರು ಬೇಕಾಗುತ್ತದೆ.