-->
1000938341
ಮೊದಲ ದಿನವೆ ಸಲಾರ್ ಹವಾ- ಬಾಕ್ಸ್ ಆಫೀಸ್ ದಾಖಲೆ ಉಡೀಸ್- 175 ಕೋಟಿ ಕಲೆಕ್ಷನ್

ಮೊದಲ ದಿನವೆ ಸಲಾರ್ ಹವಾ- ಬಾಕ್ಸ್ ಆಫೀಸ್ ದಾಖಲೆ ಉಡೀಸ್- 175 ಕೋಟಿ ಕಲೆಕ್ಷನ್

 


ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಿರುಗಾಳಿಯನ್ನೆ ಎಬ್ಬಿಸಿದೆ. ಸ್ಟಾರ್ ಡೈರೆಕ್ಟರ್​ ಪ್ರಶಾಂತ್​ ನೀಲ್​​​ ನಿರ್ದೇಶನದ 'ಸಲಾರ್​' ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ.

ತೆರೆಕಂಡ ಮೊದಲ ದಿನವೇ ಬರೋಬ್ಬರಿ 175 ಕೊಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್​ ದಾಖಲೆಗಳನ್ನು ಪುಡಿಗಟ್ಟಿದೆ. 

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ 2023ರಲ್ಲಿ ಭರ್ಜರಿ ಓಪನಿಂಗ್​ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ. ಈ ಮೂಲಕ ಪ್ರಶಾಂತ್​ ನೀಲ್, ಪ್ರಭಾಸ್​​, ಹೊಂಬಾಳೆ ಫಿಲ್ಮ್ಸ್​​ನ ಜನಪ್ರಿಯತೆ ದ್ವಿಗುಣಗೊಂಡಿದೆ.


ಬಹುನಿರೀಕ್ಷಿತ ಸಿನಿಮಾದ ಕಲೆಕ್ಷನ್ ಬೇಟೆ ಜೋರಾಗೇ ನಡೆಯುತ್ತಿದೆ. ಕೆಜಿಎಫ್​​ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ಜೊತೆ ಪ್ಯಾನ್​ ಇಂಡಿಯಾ ಸ್ಟಾರ್ ಕೈಜೋಡಿಸಿದ ಹಿನ್ನೆಲೆ 'ಸಲಾರ್​' ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶಸ್ಸು  ಕಂಡಿದೆ.  KGF ನಂತರ ಭಾರಿ ನಿರೀಕ್ಷೆಗಳೊಂದಿಗೆ ಡಿಸೆಂಬರ್ 22ರಂದು ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ ಭಾರತದಲ್ಲೇ ಸರಿಸುಮಾರು 135 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
Ads on article

Advertise in articles 1

advertising articles 2

Advertise under the article