ಹಳದಿ ಹಲ್ಲಿನ ಸಮಸ್ಯೆ ಹಾಗೂ ಬಾಯಿಯ ದುರ್ವಾಸನೆ ಹೋಗಲಾಡಿಸಲು ಇಲ್ಲಿದೆ ನೋಡಿ ಮನೆ ಮದ್ದು..!


ಹಳದಿ ಹಲ್ಲುಗಳಿಗೆ ಅರಿಶಿನ : 

ಅರಿಶಿನವು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ಅನೇಕ ಹಲ್ಲಿನ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಪ್ಲೇಕ್-ನಿಯಂತ್ರಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಹಲ್ಲುಗಳಲ್ಲಿ ಕಚ್ಚಿ ಕುಳಿತಿರುವ ಪ್ಲೇಕ್ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಅರಿಶಿನ ಆಂಟಿ-ಆಕ್ಸಿಡೆಂಟ್, ಆಂಟಿ-ಸೆಪ್ಟಿಕ್ ಮತ್ತು ಆಂಟಿ ಅಲರ್ಜಿ ಗುಣಲಕ್ಷಣಗಳನ್ನು ಹೊಂದಿದ್ದು, ಹಲ್ಲುಗಳನ್ನು ಆರೋಗ್ಯಕರವಾಗಿಡಲು ಉಪಯುಕ್ತವಾಗಿದೆ . 

ತೆಂಗಿನ ಎಣ್ಣೆಯೊಂದಿಗೆ ಅರಿಶಿನ :
ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ಬೆರೆಸಿ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು. ಈ ಮೂಲಕ ಹಲ್ಲಿನ ಹಳದಿ ಕಲೆಗಳನ್ನು ತೆಗೆದು ಹಾಕುವುದು ಸಾಧ್ಯವಾಗುವುದಲ್ಲದೆ, ಬಾಯಿಯ ದುರ್ವಾಸನೆಯನ್ನು ಕೂಡಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಉಪ್ಪು ಮತ್ತು ಅರಶಿನ : 
ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು, ಉಪ್ಪು ಮತ್ತು ಅರಿಶಿನ ಮಿಶ್ರಣವನ್ನು ಬಳಸಬಹುದು. ಉಪ್ಪು ಮತ್ತು ಅರಿಶಿನ ಒಟ್ಟಿಗೆ ಹಲ್ಲುಗಳ ಮೇಲೆ ತ್ವರಿತ ಪರಿಣಾಮ ಬೀರುತ್ತದೆ. ಹಲ್ಲುಗಳ ಮೇಲಿನ ಪ್ಲೇಕ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.