ಪವಿತ್ರ ಎ.ವಿ ಅವರಿಗೆ ಪಿಎಚ್‌ಡಿ ಪ್ರಧಾನ

 


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರ ಎ.ವಿ ಯವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರಧಾನ ಮಾಡಿದೆ.

ಪವಿತ್ರ ಎ.ವಿ ಯವರು ‘ಸೈಕೋಸೋಷಿಯಲ್ ಡೈಮೆನ್ಶನ್ಸ್ ಆಫ್ ಸುಸೈಡಲ್ ಬಿಹೇವಿಯರ್ ಅಮಾಂಗ್ ರೂರಲ್ ಅಡೊಲೆಸೆಂಟ್ಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಗವರ್ನ್ಮೆಂಟ್ ಪ್ರಿಯುನಿವರ್ಸಿಟಿ ಕಾಲೇಜಸ್ ಇನ್ ಕರ್ನಾಟಕ’ ಎಂಬ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಲೋಕೇಶ್ ಎಂ. ಯು. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದಿದ್ದಾರೆ.

ಜ. 30ರಂದು ನಡೆದ ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್  ಗೆಹ್ಲೋಟ್‌ರವರು ಪದವಿ ಪ್ರಧಾನ ಮಾಡಿದರು. ಇವರು ಎಮ್‌ಆರ್‌ಪಿಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಚೀಫ್ ಮ್ಯಾನೇಜರ್ ಸ್ವಾಮಿ ಪ್ರಸಾದ್ ಅವರ ಪತ್ನಿ.
BREAKING NEWS
Loading latest news...
Join our WhatsApp Channel Powered By : Online Pudu