-->
1000938341
ಮೊಹಮ್ಮದ್ ಶಮಿಯನ್ನು ಎರಡನೇ ಮದುವೆಯಾಗಲು ರೆಡಿ ಆದ್ರೆ ಒಂದು ಷರತ್ತು ಪೂರೈಸಬೇಕೆಂದ ನಟಿ

ಮೊಹಮ್ಮದ್ ಶಮಿಯನ್ನು ಎರಡನೇ ಮದುವೆಯಾಗಲು ರೆಡಿ ಆದ್ರೆ ಒಂದು ಷರತ್ತು ಪೂರೈಸಬೇಕೆಂದ ನಟಿ
ನವದೆಹಲಿ: ಏಕದಿನ ವಿಶ್ವಕಪ್​ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ವೇಗಿ ಆಟಗಾರ ಮೊಹಮ್ಮದ್​ ಶಮಿಯವರು ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಗೊಂಡದ್ದರಿಂದ ಅಟವಾಡುತ್ತಿರುವ ಹನ್ನೊಂದರ ತಂಡ ಸೇರಿಕೊಂಡಿದ್ದಾರೆ. ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿ ಬೌಲಿಂಗ್​ನಲ್ಲಿ​ ಮಿಂಚುತ್ತಿರುವ ಶಮಿ ಇದೀಗ ತಂಡದ ನಿರ್ಣಾಯಕ ಬೌಲರ್​ ಎನಿಸಿಕೊಂಡಿದ್ದಾರೆ. ಕೇವಲ 4 ಪಂದ್ಯಗಳಲ್ಲಿ 14 ವಿಕೆಟ್​ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಒಂದು ಪಂದ್ಯದಲ್ಲಿ 5 ವಿಕೆಟ್​ ಪಡೆದುಕೊಂಡು ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದೀಗ ಕ್ರಿಕೆಟ್ ಪ್ರಿಯರು ಶಮಿಯವರ ಬೌಲಿಂಗ್​ ವೈಖರಿಗೆ ಫಿದಾ ಆಗಿದ್ದಾರೆ. ಈ ನಡುವೆ ನಟಿಯೊಬ್ಬರು ಶಮಿಯನ್ನು ಮದುವೆಯಾಗುವ ಆಫರ್​ ನೀಡಿದ್ದಾರೆ.


ವಿಶ್ವಕಪ್​ ಕ್ರಿಕೆಟ್ ಪಂದ್ಯಾಟದಲ್ಲಿ ಶಮಿಯ ಗಮನಾರ್ಹ ಸಾಧನೆಯನ್ನು ಕಂಡು ಪ್ರಭಾವಿತರಾಗಿರುವ ಬಾಲಿವುಡ್​ ನಟಿ ಪಾಯಲ್​ ಘೋಷ್​, ಮೊಹಮ್ಮದ್​ ಶಮಿಗೆ ಮದುವೆ ಆಫರ್​ ನೀಡಿದ್ದಾರೆ. ಆದರೆ, ಒಂದು ಷರತ್ತನ್ನು ಹಾಕಿದ್ದಾರೆ. ನಾನು ಶಮಿಯನ್ನು ಎರಡನೇ ವಿವಾಹವಾಗಲು ತಯಾರಿದ್ದೇನೆ. ಆದರೆ, ಒಂದು ಷರತ್ತು. ಅದೇನೆಂದರೆ, ಶಮಿ ತನ್ನ ಇಂಗ್ಲಿಷ್​ ಮಾತನಾಡುವ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕು. ಇದಕ್ಕೆ ಓಕೆ ಅಂದರೆ, ನನಗೂ ಓಕೆ ಎಂದು ಎಕ್ಸ್​ (ಈ ಹಿಂದೆ ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ ಪಾಯಲ್​ ಘೋಷ್​ 2009ರಲ್ಲಿ ತೆರೆಕಂಡ ಮಂಚು ಮನೋಜ್​ ಅಭಿನಯದ ಪ್ರಣಯಂ ಸಿನಿಮಾದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. ಜೂ. ಎನ್​ಟಿಆರ್​ ಅಭಿನಯದ ಊಸರವಳ್ಳಿ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article