ಮಂಗಳೂರು: ಉಡುಪಿಯ ನೇಜಾರಿನಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಹತ್ಯೆ ಮಾಡಿರುವ ಪ್ರಕರಣದ ಹಂತಕ ಪ್ರವೀಣ್ ಅರುಣ್ ಚೌಗುಲೆಯನ್ನು ಮಂಗಳೂರಿಗೆ ಕರೆತಂದ ಉಡುಪಿ ಪೊಲೀಸರು ನಗರದ ಪದವಿನಂಗಡಿಯಲ್ಲಿರುವ ಆತನ ನಿವಾಸದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದರು.
ಆರೋಪಿ ನಾಲ್ವರ ಹತ್ಯೆಗೆ ಬಳಸಿರುವ ಚಾಕು ಈವರೆಗೆ ಪತ್ತೆಯಾಗಿಲ್ಲ. ಅದಕ್ಕಾಗಿ ಪೊಲೀಸರ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದ್ದರಿಂದ ಮಂಗಳೂರಿನ ಪದವಿನಂಗಡಿಯಲ್ಲಿರುವ ನಿವಾಸಕ್ಕೆ ಪ್ರವೀಣ್ ಅರುಣ್ ಚೌಗುಲೆಯನ್ನು ಉಡುಪಿ ಪೊಲೀಸರು ಕರೆ ತಂದಿದ್ದಾರೆ. ಪ್ರಕರಣದ ತನಿಖಾಧಿಕಾರಿ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆರೋಪಿ ವಾಸವಿದ್ದ ಮನೆಯಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.