ಸಂಬಳ ಕೇಳಿದ ನೌಕರನಿಗೆ ಬೂಟ್ ನೆಕ್ಕಿಸಿದ ಮಹಿಳಾ ಉದ್ಯಮಿ

ಮೊರ್ಬಿ: ಬಾಕಿ ಸಂಬಳ ಕೇಳಲು ಬಂದ ನೌಕರನಿಗೆ
ಮಹಿಳಾ ಉದ್ಯಮಿಯೋರ್ವಳು ತನ್ನ ಬೂಟು ನೆಕ್ಕುವಂತೆ ಮಾಡಿದ ಹಾಗೂ ಇತರ ನೌಕರರಿಂದ ಬೆಲ್ಟ್ನಿಂದ ಹೊಡೆಸಿದ ಹೇಯ ಘಟನೆ ಗುಜರಾತ್‌ನ ಮೊರ್ಬಿಯಲ್ಲಿ ನಡೆದಿದೆ. 



ಇಲ್ಲಿನ ಸೆರಾಮಿಕ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ನಿಲೇಶ್‌ ದಾಲ್ಸಾನಿಯಾ ಎಂಬ ವ್ಯಕ್ತಿಯನ್ನು ಕೇವಲ 18 ದಿನಗಳಲ್ಲೇ ವಜಾಗೊಳಿಸಲಾಗಿತ್ತು. ಬಳಿಕ ಆ 18 ದಿನಗಳ ತನ್ನ ಕೆಲಸಕ್ಕೆ ನೀಡಬೇಕಾಗಿದ್ದ ಸಂಬಳ ಕೇಳಲು ಬುಧವಾರ ನಿಲೇಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ರಾಣಿಬಾ ಇಂಡಸ್ಟ್ರೀಸ್ (ಟೈಲ್ಸ್ ಕಂಪನಿ)ಗೆ ತೆರಳಿದ್ದ. 

ಈ ವೇಳೆ ನಿಲೇಶ್‌ನನ್ನು ಕಂಡು ಕೋಪಗೊಂಡ ರಾಣಿಬಾ
ಮತ್ತು ಆಕೆಯ ಸಹಾಯಕ ಮೊದಲು ಮೂವರಿಗೂ ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಐವರು ಇತರ
ಆರೋಪಿಗಳು ನಿಲೇಶ್‌ಗೆ ತೀವ್ರವಾಗಿ ಥಳಿಸಿದ್ದಾರೆ. ಅದಾಗ್ಯೂ ಆತನನ್ನು ಕಂಪನಿಯ ತಾರಸಿಗೆ ಕರೆದೊಯ್ದು ಮತ್ತೆ ಬೆಲ್ಟ್ ನಿಂದ ಹೊಡೆದಿದ್ದಾರೆ. ಈ ವೇಳೆ ನಿಲೇಶ್ ದಲಿತ ಎಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿದ್ದಾರೆ.

ಈ ವೇಳೆ ರಾಣಿಬಾ ನಿಲೇಶ್‌ಗೆ ತನ್ನ ಬೂಟು ನೆಕ್ಕುವಂತೆ ಮಾಡಿದ್ದಾಳೆ. ಈ ಬಗ್ಗೆ ಆಕೆಯ ವಿರುದ್ಧ ದೂರು ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu