ದೀಪವಿಡಲು ಹೋಗಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಯುವಕ ಸಾವು


ಹೆಬ್ರಿ: ದೀಪಾವಳಿ ಹಿನ್ನೆಲೆಯಲ್ಲಿ ಮನೆ ಸಮೀಪದ ಬಾವಿ ಕಟ್ಟೆಯಲ್ಲಿ ದೀಪ ಇಡಲು ಹೋದ ಯುವಕನೊಬ್ಬ ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನ.12ರಂದು ರಾತ್ರಿ ನಡೆದಿದೆ.

 ಚಾರ ಗ್ರಾಮದ ಚಾರ ಬಸದಿ ಬಳಿಯ ನಿವಾಸಿ ಸಚಿನ್(35) ಮೃತಪಟ್ಟ ಯುವಕ

ಸಚಿನ್ ಮನೆಯ ಹತ್ತಿರ ಆವರಣವಿಲ್ಲದ ಬಾವಿಗೆ ದೀಪ ವನ್ನು ಇಡಲು ಹೋಗಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu