-->
1000938341
ಐದರ ಬಾಲಕನ ಹುಟ್ಟುಹಬ್ಬಕ್ಕೂ ಮುನ್ನವೇ ಇಡೀ ಕುಟುಂಬದ ಹತ್ಯೆ : ಸಮಾಧಿಯ ಮೇಲೆ ಬೊಂಬೆಗಳ ಉಡುಗೊರೆಗಳನ್ನಿಟ್ಟ ಅಜ್ಜ - ಅಜ್ಜಿ

ಐದರ ಬಾಲಕನ ಹುಟ್ಟುಹಬ್ಬಕ್ಕೂ ಮುನ್ನವೇ ಇಡೀ ಕುಟುಂಬದ ಹತ್ಯೆ : ಸಮಾಧಿಯ ಮೇಲೆ ಬೊಂಬೆಗಳ ಉಡುಗೊರೆಗಳನ್ನಿಟ್ಟ ಅಜ್ಜ - ಅಜ್ಜಿ

ನವದೆಹಲಿ: ಹಮಾಸ್​ ಉಗ್ರರ ದಾಳಿಗೆ ಇಸ್ರೇಲ್​ನಲ್ಲಿ ರಣಭೀಕರ ಪರಿಸ್ಥಿತಿ ಸೃಷ್ಟಿಗಿದ್ದು, ಅಲ್ಲಿನ ಪ್ರಕ್ಷುಬ್ಧ ವಾತಾವರಣ ಇನ್ನೂ ತಿಳಿಯಾಗಿಲ್ಲ. ಅಲ್ಲಿ ಮತ್ತೆ ಮತ್ತೆ ಗುಂಡಿನ ಮೊರೆತ ಕೇಳುತ್ತಿದ್ದು, ಜನರಲ್ಲಿ ಆತಂಕ ಮುಂದುವರಿದಿದೆ. ಈ ಮಧ್ಯೆ ಒಂದೊಂದೇ ದುರಂತಗಳು ಬಹಿರಂಗಗೊಳ್ಳುತ್ತಿವೆ.

ಹಮಾಸ್​ ಉಗ್ರರ ದಾಳಿಯಿಂದಾಗಿ ನಲುಗಿರುವ ಇಸ್ರೇಲ್ ಜನತೆ ಎದುರಿಸಿದ ಭಯಾನಕತೆ, ಅನುಭವಿಸಿದ ನೋವು-ಯಾತನೆಗಳು ಒಂದೊಂದಾಗಿ ಬಯಲಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಇಟಲಿಯ ಗಾಯಕಿಯೊಬ್ಬಳು ಇಲ್ಲಿಗೆ ಹಾಡಲು ಬಂದು ಹಮಾಸ್ ಉಗ್ರರ ಕೈಗೆ ಸಿಲುಕಿ ಭೀಕರವಾಗಿ ಹತ್ಯೆಯಾಗಿದ್ದಳು. ಇದೀಗ ಹಮಾಸ್ ಉಗ್ರರ ದಾಳಿಗೆ ನಲುಕಿದ ಕುಟುಂಬವೊಂದರ ಕರುಣಾಜನಕ ಸಂಗತಿಯೊಂದನ್ನು ಇಸ್ರೇಲ್​ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದೆ. ಐಟನ್ ಎಂಬ ಐದು ವರ್ಷದ ಬಾಲಕ ತನ್ನ ಹುಟ್ಟುಹಬ್ಬದ ಮುನ್ನಾದಿನವೇ ತಂದೆ-ತಾಯಿ, ಸೋದರಿ ಸಹಿತ ಹಮಾಸ್ ಉಗ್ರರಿಂದ ಹತ್ಯೆಗೀಡಾದ ವಿಚಾರವನ್ನು ಇಸ್ರೇಲ್ ಹಂಚಿಕೊಂಡಿದೆ.

ಅ.8ರಂದು ಐಟನ್​ನ ಬರ್ತ್​ಡೇ. ಆ ಸಲುವಾಗಿ ಆತನ ಪಾಲಕರು ತಮ್ಮ ಪುತ್ರಿ-ಪುತ್ರನನ್ನು ಕರೆದುಕೊಂಡು ದಕ್ಷಿಣ ಇಸ್ರೇಲ್​ನ ಪ್ರದೇಶಕ್ಕೆ ಕ್ಯಾಂಪಿಂಗ್ ಗೆ ಹೋಗಿದ್ದರು. ದುರದೃಷ್ಟವಶಾತ್ ಅ. 7ರಂದು ನಡೆದ ಹಮಾಸ್ ಉಗ್ರರ ದಾಳಿಗೆ ಈ ಕುಟುಂಬ ಸಿಲುಕಿದ್ದು, ಅವರು ಐಟನ್, ಆತನ ಏಳು ವರ್ಷದ ಸಹೋದರಿ ಹಾಗೂ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಮೊಮ್ಮಗನ ಬರ್ತ್​ಡೇಗೆಂದು ಅಜ್ಜ-ಅಜ್ಜಿ ತಂದಿಟ್ಟಿದ್ದ ಉಡುಗೊರೆಯ ಗೊಂಬೆಗಳನ್ನು ಬಳಿಕ ಆತನ ಸಮಾಧಿ ಮೇಲಿಟ್ಟ ಚಿತ್ರವನ್ನು ಇಸ್ರೇಲ್ ಹಂಚಿಕೊಂಡಿದ್ದು, ಹಮಾಸ್​ ದಾಳಿಯ ಭೀಕರತೆ ಹಾಗೂ ಅದರಿಂದಾದ ದುರಂತವನ್ನು ಅನಾವರಣಗೊಳಿಸಿದೆ.

Ads on article

Advertise in articles 1

advertising articles 2

Advertise under the article