-->
1000938341
ಉಡುಪಿ: ಒಂದೇ ಮನೆಯ ನಾಲ್ವರ ಹತ್ಯೆ ಮಾಡಿದ ಶಂಕಿತ ಹಂತಕ ಬೆಳಗಾವಿಯಲ್ಲಿ ವಶಕ್ಕೆ

ಉಡುಪಿ: ಒಂದೇ ಮನೆಯ ನಾಲ್ವರ ಹತ್ಯೆ ಮಾಡಿದ ಶಂಕಿತ ಹಂತಕ ಬೆಳಗಾವಿಯಲ್ಲಿ ವಶಕ್ಕೆ

ಉಡುಪಿ: ಇಲ್ಲಿನ ನೇಜಾರಿನ ಒಂದೇ ನಾಲ್ವರನ್ನು ಹತ್ಯೆ ಮಾಡಿರುವ ಶಂಕಿತ ಆರೋಪಿಯನ್ನು ಉಡುಪಿ ಪೊಲೀಸರು ಬೆಳಗಾವಿಯ ಕುಡುಚಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರ ಸಾಂಗ್ಲಿ ಮೂಲದ ಆರೋಪಿ ಪ್ರವೀಣ್​​​​ ಅರುಣ್​​​ ಚೌಗಲೆ ಬಂಧಿತ ಆರೋಪಿ. ಈತ ಮಂಗಳೂರು ಏರ್​ಪೋರ್ಟ್​ನಲ್ಲಿ​ ಸೆಕ್ಯೂರಿಟಿ ಕೆಲಸ ಮಾಡ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಶಂಕೆಯ ಮೇರೆಗೆ ಈತನನ್ನು ಅರೆಸ್ಟ್ ಮಾಡಲಾಗಿದೆ.

ಪ್ರವೀಣ್​​​​ ಅರುಣ್​​​ ಚೌಗಲೆ ನೀರಾವರಿ ಇಲಾಖೆಯ ಅಧಿಕಾರಿಯ ಸಂಬಂಧಿಯಾಗಿದ್ದ. ಇವರ ಕುಡಚಿಯ ಮನೆಯಲ್ಲಿಯೇ ಪ್ರವೀಣ್ ಅಡಗಿ ಕುಳಿತಿದ್ದ ​ಎನ್ನಲಾಗಿದೆ. ಮೊಬೈಲ್​​ ಟವರ್​ ಲೊಕೇಶನ್​​​ ಆಧರಿಸಿ ಆರೋಪಿಯನ್ನು  ಬಂಧಿಸಲಾಗಿದೆ.​​ ಉಡುಪಿಗೆ ಆರೋಪಿಯನ್ನು ಕರೆ ತರಲಾಗುತ್ತಿದೆ ಎಂಬ ಮಾಹಿತಿಯಿದೆ‌. ಆದರೆ ಈವರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿರುವ ಬಗ್ಗೆ ಖಚಿತಪಡಿಸಿಲ್ಲ.

Ads on article

Advertise in articles 1

advertising articles 2

Advertise under the article