ಮಂಗಳೂರು: ಹಿಮ್ಮುಖವಾಗಿ ಸಂಚರಿಸಿದ ನಿಂತಿದ್ದ ಲಾರಿ - ಓರ್ವನಿಗೆ ಗಂಭೀರ ಗಾಯ, ನಾಲ್ಕು ಕಾರುಗಳು, ಬೈಕ್ ಜಖಂ

ಸುರತ್ಕಲ್: ನಿಂತಿದ್ದ ಲಾರಿ ಹಿಮ್ಮುಖವಾಗಿ ಸಂಚರಿಸಿ ಭಾರೀ ಅವಾಂತರ ಸೃಷ್ಟಿಯಾಗಿರುವ ಘಟನೆ ನಗರದ ಸುರತ್ಕಲ್ ನಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡು, ನಾಲ್ಕು ಕಾರುಗಳು, ದ್ವಿಚಕ್ರ ವಾಹನ ಜಖಂಗೊಂಡಿದೆ.

ಸರಕು ಹೇರಿಕೊಂಡು ಬಂದಿದ್ದ ಲಾರಿಯೊಂದು ಸುರತ್ಕಲ್ ಪೇಟೆಯಲ್ಲಿ ನಿಂತಿತ್ತು. ಚಾಲಕ ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ತೆರಳಿದ್ದ. ರೈಲ್ವೆ ನಿಲ್ದಾಣದ ರಸ್ತೆಯಲ್ಲಿನ ಭಾರತ್ ಪೆಟ್ರೋಲ್ ಬಂಕ್‌ ಬಳಿ ನಿಲ್ಲಿಸಲಾಗಿದ್ದ ಲಾರಿಯು ಯುಟರ್ನ್ ನಲ್ಲಿ ಸಲೀಸಾಗಿ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಹೀಗೆ ಸಂಚರಿಸಿದ ಲಾರಿ ವಿರುದ್ಧ ಪಾಶ್ವದಲ್ಲಿರುವ ಮೂಡ ಮಾರುಕಟ್ಟೆಯ ಪಾರ್ಕಿಂಗ್ ನಲ್ಲಿ‌ ನಿಲ್ಲಿಸಲಾಗಿದ್ದ ಕಾರುಗಳಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಬಳಿ ನಿಂತಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿದೆ. ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರ ಪೊಲೀಸರು ಸ್ಥಳಲ್ಲೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu