-->
ಮಂಗಳೂರು: ಬಾಲ್ ಪಾಯಿಂಟ್ ಒಎನ್, ಸ್ಟೀಲ್ ಸ್ಕ್ರಬ್ಬರ್  ನಲ್ಲಿ ಚಿನ್ನ ಅಕ್ರಮ ಸಾಗಾಟ-  70 ಲಕ್ಷ ರೂ. ಮೌಲ್ಯದ ಬಂಗಾರ ಸೀಝ್

ಮಂಗಳೂರು: ಬಾಲ್ ಪಾಯಿಂಟ್ ಒಎನ್, ಸ್ಟೀಲ್ ಸ್ಕ್ರಬ್ಬರ್ ನಲ್ಲಿ ಚಿನ್ನ ಅಕ್ರಮ ಸಾಗಾಟ- 70 ಲಕ್ಷ ರೂ. ಮೌಲ್ಯದ ಬಂಗಾರ ಸೀಝ್ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿರುವ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 70 ಲಕ್ಷ ರೂ. ಮೌಲ್ಯದ ಅಕ್ರಮ ಸಾಗಾಟದ ಚಿನ್ನ ಪತ್ತೆಯಾಗಿದೆ.


ನ.8 ಹಾಗೂ ನ.13ರಂದು ಇಂಡಿಗೋ ವಿಮಾನ 6E1163 ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ IX814 ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರು ಬಂದಿಳಿದಿದ್ದಾರೆ. ಇವರನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 21.6/24 ಕ್ಯಾರೆಟ್ ಚಿನ್ನ ಪತ್ತೆಯಾಗಿದೆ. ಓರ್ವ ಪ್ರಯಾಣಿಕ ಟ್ರಾಲಿ ಬ್ಯಾಗ್‌ನಲ್ಲಿ ಮಣಿ ಹಾಕುವ ರಾಡ್‌ಗಳ ರೂಪದಲ್ಲಿ, ವಾಚ್, ಬಾಲ್-ಪಾಯಿಂಟ್ ಪೆನ್, ಹೇರ್ ಟ್ರಿಮ್ಮರ್, ಸ್ಟೀಲ್ ವೂಲ್ ಸ್ಕ್ರಬರ್ ಹಾಗೂ ಒಂದು ರೇಡಿಯಂ ಲೇಪಿತ ನಾಣ್ಯದಲ್ಲಿ ಬಚ್ಚಿಟ್ಟು ಚಿನ್ನ ಸಾಗಿಸುತ್ತಿದ್ದ. ಈತನಲ್ಲಿ ಒಟ್ಟು 322 ಗ್ರಾಂ ತೂಕದ 18,17,718 ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.
ಮತ್ತೋರ್ವ ಪ್ರಯಾಣಿಕನ ಚೆಕ್-ಇನ್ ಬ್ಯಾಗೇಜ್ ಸ್ಕ್ಯಾನ್ ಮಾಡುವಾಗ ಎರಡು ಕಾರ್ ಸ್ಪೀಕರ್‌ ಗಳಲ್ಲಿ 2 ವೃತ್ತಾಕಾರದ ತುಂಡುಗಳು, ಏರ್‌ಪಾಡ್‌ ನಲ್ಲಿ 2 ಆಯತಾಕಾರದ ಕಟ್ ತುಂಡುಗಳು ಮತ್ತು ಪವರ್ ಅಡಾಪ್ಟರ್‌ ನಲ್ಲಿ ಒಂದು ಆಯತಾಕಾರದ ತುಂಡು ಚಿನ್ನ ಪತ್ತೆಯಾಗಿದೆ. ಈತನಲ್ಲಿ 857 ಗ್ರಾಂ 24 ಕ್ಯಾರೆಟ್ ಶುದ್ಧತೆಯ 51,84,850 ರೂ ಮೌಲ್ಯದ ಚಿನ್ನವನ್ನು ವಶಪಡಿಸಲಾಗಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article