-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನೆಹರೂ ಪತ್ನಿ ಹಣೆಪಟ್ಟಿ ಕಟ್ಟಿಕೊಂಡಿದ್ದ ಮಹಿಳೆ ನಿಧನ: 64 ವರ್ಷದಿಂದ ಈ ಶಿಕ್ಷೆ ಪಡೆದ ಈ ಮಹಿಳೆ ಯಾರು ಗೊತ್ತಾ?

ನೆಹರೂ ಪತ್ನಿ ಹಣೆಪಟ್ಟಿ ಕಟ್ಟಿಕೊಂಡಿದ್ದ ಮಹಿಳೆ ನಿಧನ: 64 ವರ್ಷದಿಂದ ಈ ಶಿಕ್ಷೆ ಪಡೆದ ಈ ಮಹಿಳೆ ಯಾರು ಗೊತ್ತಾ?


ಜಾರ್ಖಂಡ್ ನ  ಪಂಚೇಟ್ ಅಣೆಕಟ್ಟನ್ನು ಉದ್ಘಾಟಿಸಿದ್ದ
ಬುಡಕಟ್ಟು ಸಮುದಾಯದ ಬುಧ್ನಿ ಮಾಂಜಿಯಾನ್​ ಅವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

 ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರ ಪತ್ನಿ ಎಂದೇ ಹಣೆಪಟ್ಟಿ ಕಟ್ಟಿಕೊಂಡು ಶಿಕ್ಷೆಗೆ ಗುರಿಯಾಗಿದ್ದ  ಅವರು 64 ವರ್ಷಗಳಿಂದ ಈ ಕಳಂಕದಲ್ಲಿ ಜೀವನ ನಡೆಸಿದ್ದರು.  ಸಿಐಎಸ್ಎಫ್ ಯೋಧರು ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಪಂಚೇಟ್​ ಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಬುಡಕಟ್ಟು ಸಮುದಾಯದ ಬುಧ್ನಿ ಅವರು ಮಾಡದ ತಪ್ಪಿಗೆ 64ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದರು. ಬಹು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾರ್ಖಂಡ್​ನ ನಿರ್ಸಾದ ಪಂಚೇಟ್ ಹಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.


ಬುಧ್ನಿ ಮಾಂಜಿಯಾನ್​​ ನೆಹರೂ ಪತ್ನಿಯೇ?: ಪಶ್ಚಿಮಬಂಗಾಳದ ಮೂಲದ ಬುಧ್ನಿ ಮಾಂಜಿಯಾನ್​​ ಅವರು 17 ವರ್ಷದವರಾಗಿದ್ದಾಗ, ಮಾಜಿ ಪ್ರಧಾನಿ ದಿವಂಗತ ಜವಾಹರ್​ಲಾಲ್​ ನೆಹರೂ ಅವರ ಕೋರಿಕೆಯ ಮೇರೆಗೆ ಪಂಟೇಲ್​ ಅಣೆಕಟ್ಟನ್ನು ಉದ್ಘಾಟನೆ ಮಾಡಿದ್ದರು. ಈ ವೇಳೆ ನೆಹರೂ ಅವರು ಆಕೆಯ ಕೊರಳಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದರು. ಇದು ಅವರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆದಿವಾಸಿಗಳ ಸಂಪ್ರದಾಯದಲ್ಲಿ ಕೊರಳಿಗೆ ಹಾರ ಹಾಕಿಸಿಕೊಂಡಲ್ಲಿ ಅವರ ಪತ್ನಿಯಾಗುತ್ತಾರೆ.

ಪಂಚಾಯಿತಿ ಸೇರಿದ ಬುಡಕಟ್ಟು ಸಮುದಾಯ  1959ರಿಂದ ಬುಧ್ನಿ ಅವರನ್ನು ಜವಾಹರ್​ಲಾಲ್​ ನೆಹರೂ ಅವರ ಪತ್ನಿ ಎಂದು ಘೋಷಿಸಿತು. ಆದಿವಾಸಿಗಳಲ್ಲದ ವ್ಯಕ್ತಿಯನ್ನು ವಿವಾಹವಾಗಿದ್ದಕ್ಕೆ ಸಮುದಾಯದಿಂದಲೇ ಆಕೆಯನ್ನು ಬಹಿಷ್ಕಾರ ಹಾಕಲಾಗಿತ್ತು. ಬಳಿಕ ಅವರು ಜಾರ್ಖಂಡ್​ಗೆ ಬಂದು ನೆಲೆಸಿದ್ದರು.ಬಳಿಕ ವ್ಯಕ್ತಿಯೊಬ್ಬರ ಜೊತೆ ಜೀವನ ಸಾಗಿಸಿದ ಅವರಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

 ಸಮುದಾಯದಿಂದ ಶಿಕ್ಷೆಗೆ ಒಳಗಾಗಿದ್ದನ್ನು ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರ ಗಮನಕ್ಕೂ ಈ ವಿಚಾರವನ್ನು ತರಲಾಗಿತ್ತು. ಅಲ್ಲದೇ ತಾವು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಹೊರಹಾಕಿದ್ದನ್ನು ತಿಳಿಸಿದ್ದರು. ಆಕೆಗೆ ನೆರವು ನೀಡಿದ ರಾಜೀವ್​ ಗಾಂಧಿ ಅವರು ಅದೇ ಕಂಪನಿಯಲ್ಲಿ ವಾಪಸ್​ ಕೆಲಸಕ್ಕೆ ಸೇರಿಸಿದ್ದರು.

ಇದಾದ ಬಳಿಕ ಬುಧ್ನಿ ಮಾಂಜಿಯನ್​ ಅವರು ಈಚೆಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಬಳಿ ಮನೆ ಮತ್ತು ಮಗಳಿಗೆ ಉದ್ಯೋಗ ಕೊಡಿಸಬೇಕು ಎಂದು ನೆರವನ್ನು ಕೋರಿದ್ದರು. ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು.
 

Ads on article

Advertise in articles 1

advertising articles 2

Advertise under the article

ಸುರ