ಮಂಗಳೂರು: ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ನೀಡಿ 5.85 ಲಕ್ಷ ರೂ. ವಂಚನೆ

ಮಂಗಳೂರು: ಟೆಲಿಗ್ರಾಂ ಆ್ಯಪ್‌ನಲ್ಲಿ ಪಾರ್ಟ್‌ಟೈಮ್ ಜಾಬ್‌ನ ಆಫರ್ ಮಾಡಿರುವ ಅಪರಿಚಿತ ಟಾಸ್ಕ್ ನೀಡಿ 5.85 ಲಕ್ಷ ರೂಪಾಯಿಯನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.30ರಂದು ದೂರು ನೀಡಿರುವ ವ್ಯಕ್ತಿಯ ಮೊಬೈಲ್ ನಂಬರ್‌ಗೆ ಮೆಸೇಜ್‌ನಲ್ಲಿ ಟಾಸ್ಕ್ ಕಂಪ್ಲೇಟ್ ಮಾಡಿ ಹಣ ಗಳಿಸಿ ಎಂದು ತಿಳಿಸಲಾಗಿತ್ತು. ಅದನ್ನು ನಂಬಿದ ಅವರು ಹಣ ಪಾವತಿಸಿ ಟಾಸ್ಕ್ ಪೂರ್ಣಗೊಳಿಸಿದ್ದರು. ಆದರೆ ಬಳಿಕ ಹಂತ ಹಂತವಾಗಿ ನ.13ರವರೆಗೆ 5.85 ಲಕ್ಷ ರೂ.ವನ್ನು ಪಡೆದು ಬಳಿಕ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.