-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅದೃಷ್ಟ ಅಂದ್ರೆ ಇವರದ್ದು, ಕೇರಳ ಮೂಲದ ವ್ಯಕ್ತಿಗೆ ಹೊಡಿಯಿತು 45 ಕೋಟಿ ರೂ. ದುಬೈ ಲಾಟರಿ

ಅದೃಷ್ಟ ಅಂದ್ರೆ ಇವರದ್ದು, ಕೇರಳ ಮೂಲದ ವ್ಯಕ್ತಿಗೆ ಹೊಡಿಯಿತು 45 ಕೋಟಿ ರೂ. ದುಬೈ ಲಾಟರಿ


ನವದೆಹಲಿ: ಅದೃಷ್ಟ ಹೇಗೆ ಬರುತ್ತದೆ ಎಂದು ಹೇಳುವುದೇ ಅಸಾಧ್ಯ. ಯಾರು ಯಾರಿಗೋ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗುತ್ತಾರೆ. ನಮಗ್ಯಾಕೆ ಇಂಥಹ ಅದೃಷ್ಟವಿಲ್ಲ ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಇಂಥಹದ್ದೇ ಅದೃಷ್ಟವೊಂದು ದುಬೈನಲ್ಲಿರುವ ಕೇರಳದ ವ್ಯಕ್ತಿಯೊಬ್ಬರ ಮನೆ ಬಾಗಿಲು ತಟ್ಟಿದೆ. 

ಅರಬ್​ ರಾಷ್ಟ್ರದ ಯುಎಇಯಾದ್ಯಂತ ವಾಸಿಸುತ್ತಿರುವ ಭಾರತೀಯರ ಪೈಕಿ ಕಳೆದೊಂದು ವಾರದಲ್ಲಿ ಸುಮಾರು ಐವರು ಲಾಟರಿ ಗೆದ್ದು ರಾತ್ರೋರಾತ್ರಿ ಸಿರಿವಂತರಾಗಿದ್ದಾರೆ. ಇದೀಗ ಕೇರಳ ಮೂಲದ ಶ್ರೀಜು ಎಂಬುವವರು ಬರೋಬ್ಬರಿ 45 ಕೋಟಿ ರೂಪಾಯಿ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ಧಾರೆ.

ದುಬೈನ ಖಾಸಗಿ ಕಂಪನಿಯಲ್ಲಿ ತೈಲ ಮತ್ತು ಅನಿಲ ಉದ್ಯಮದ ನಿಯಂತ್ರಣ ಕೊಠಡಿಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀಜು ಲಾಟರಿ ಹಣ ಗೆದ್ದಿದ್ದಾರೆ. ಬುಧವಾರ ಪ್ರಕಟಗೊಂಡ ಲಾಟರಿ ಫಲಿತಾಂಶದಲ್ಲಿ 45 ಕೋಟಿ ರೂಪಾಯಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಉಳಿದಂತೆ ಕೇರಲ ಮೂಲದ ಶರತ್​ ಶಿವದಾನಸ್ 11 ಲಕ್ಷ ರೂ., ಮುಂಬೈ ಮೂಲದ ಮನೋಜ್ ಭಾವಸಾರ್ 16 ಲಕ್ಷ ರೂ., ದೆಹಲಿ ಮೂಲದ ಅನಿಲ್​ ಜಿಯಾಚಂದಾನಿ 10 ಲಕ್ಷ ರೂ., ಕಳೆದ ಎರಡು ವಾರಗಳಲ್ಲಿ ಗೆದ್ದಿರುವ ಲಾಟರಿ ಮೊತ್ತವಾಗಿದೆ.

Ads on article

Advertise in articles 1

advertising articles 2

Advertise under the article

ಸುರ