-->

29 ಮಂದಿಗೆ ಕಚ್ಚಿದ್ದ ಶ್ವಾನಕ್ಕೆ ರೇಬಿಸ್

29 ಮಂದಿಗೆ ಕಚ್ಚಿದ್ದ ಶ್ವಾನಕ್ಕೆ ರೇಬಿಸ್


ಚೆನ್ನೈ: ತಮಿಳುನಾಡಿನ ಚೆನ್ನೈಯಲ್ಲಿ 29 ಮಂದಿಯನ್ನು ಕಚ್ಚಿದ್ದಕ್ಕಾಗಿ ಸಾರ್ವಜನಿಕರು ಹೊಡೆದು ಕೊಂದ ಶ್ವಾನದಿಂದ ಸಂಗ್ರಹಿಸಿದ ಮಾದರಿಯಲ್ಲಿ ರೇಬಿಸ್ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಇದು ಎಲ್ಲರನ್ನೂ ಆತಂಕಕ್ಕೀಡುಮಾಡಿದೆ. ಚೆನ್ನೈಯ ರಾಯುರಂನಲ್ಲಿ ಶ್ವಾನವೊಂದು 29 ಮಂದಿಯನ್ನು ಕಚ್ಚಿತ್ತು ಈ ಹಿನ್ನೆಲೆಯಲ್ಲಿ ಮಂಗಳವಾರ ಸಿಟ್ಟಿಗೆದ್ದ ಜನರು ಶ್ವಾನವನ್ನು ಕೊಂದುಹಾಕಿದ್ದರು.


 ಬಳಿಕ ಕಾರ್ಪೊರೇಶನ್ ಅಧಿಕಾರಿಗಳು ಅದರ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ್ದು ರೇಬಿಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶ್ವಾನ ಕಚ್ಚಿದ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ರೇಬಿಸ್ ಚುಚ್ಚುಮದ್ದು ಪಡೆಯಲು ಸೂಚಿಸಲಾಗಿದೆ.

Ads on article

Advertise in articles 1

advertising articles 2

Advertise under the article