-->

ಹಿಂದಿ ಬಿಗ್​ ಬಾಸ್​ ಸೀಸನ್​-2 ವಿನ್ನರ್​ ಆಯೋಜಿಸಿರುವ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಐವರು ಅರೆಸ್ಟ್

ಹಿಂದಿ ಬಿಗ್​ ಬಾಸ್​ ಸೀಸನ್​-2 ವಿನ್ನರ್​ ಆಯೋಜಿಸಿರುವ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಐವರು ಅರೆಸ್ಟ್


ನೋಯ್ಡಾ: ಉತ್ತರಪ್ರದೇಶದ ನೋಯ್ಡಾದಲ್ಲಿ ರೇವ್​ ಪಾರ್ಟಿ ಆಯೋಜಿಸಿರುವ ಆರೋಪದಲ್ಲಿ ಹಿಂದಿ ಬಿಗ್​ ಬಾಸ್​ ಸೀಸನ್​-2 ವಿನ್ನರ್​ ಎಲ್ವಿಶ್​ ಯಾದವ್ ಸೇರಿದಂತೆ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರನ್ನು ವಶಕ್ಕೆ ಪಡೆದಿದ್ದಾರೆ.

ರೇವ್​ ಪಾರ್ಟಿ ಆಯೋಜನೆ ಹಾಗೂ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಮಾಡಿದ್ದಕ್ಕೆ ಪೊಲೀಸರು ಪ್ರಕರಣದಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸೂರಜ್​ಪುರ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಐವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಎಲ್ವಿಶ್​ ಯಾದವ್​ನನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ. ಇದು  ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈತ ಉತ್ತರಪ್ರದೇಶ ಹಾಗೂ ಹರಿಯಾಣದ ಪ್ರಭಾವಿ ನಾಯಕರ ಜತೆ ಒಡನಾಟ ಹೊಂದಿದ್ದು, ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​, ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್​ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಲ್ವಿಶ್​ ವಿರುದ್ಧ ಸಾಕಷ್ಟು ಕ್ರಿಮಿನಲ್​ ಮೊಕದ್ದಮೆಗಳು ದಾಖಲಾಗಿದ್ದು, ಪ್ರಭಾವಿಗಳು ಈತನ ಬೆನ್ನಿಗೆ ನಿಂತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.

Ads on article

Advertise in articles 1

advertising articles 2

Advertise under the article