ಬಂಟ್ವಾಳ: ದ್ವಿಚಕ್ರ ವಾಹನದಲ್ಲಿದ್ದ ಒಂದು ಲಕ್ಷ ರೂ. ನಗದು ಕಳವು

ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಇರಿಸಲಾಗಿದ್ದ 1 ಲಕ್ಷ ರೂ. ಹಣವನ್ನು ಕಳವುಗೈದಿರುವ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ ನರಿಕೊಂಬು ನಿವಾಸಿ ಪ್ರಕಾಶ್ ಕೋಡಿಮಜಲು ಎಂಬವರು ಬ್ಯಾಂಕ್ ನಿಂದ 1.40 ಲಕ್ಷ ರೂ ನಗದು ಡ್ರಾ ಮಾಡಿದ್ದರು. ಇದನ್ನು ದ್ವಿಚಕ್ರವಾಹನದ ಸೀಟ್ ನಡಿಯಲ್ಲಿರುವ ಬಾಕ್ಸ್ ನಲ್ಲಿ ಇರಿಸಿದ್ದರು. ಬಳಿಕ ಬಿ.ಸಿ.ರೋಡ್ ನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಗಾಡಿ ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದರು. ಆದರೆ ಮಧ್ಯಾಹ್ನ ಬಂದಾಗ ಅವರ ವಾಹನದ ಸೀಟ್ ಲಾಕ್ ತೆರೆದಾಗ ಅದರೊಳಗೆ ಇರಿಸಲಾಗಿದ್ದ 1.40 ಲಕ್ಷದಲ್ಲಿ 40 ಸಾವಿರ ರೂ. ಮಾತ್ರ ಇತ್ತು ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu