-->

ಮಂಗಳೂರು: ಶಿವಮೊಗ್ಗ ಪ್ರಕರಣ ಹೇಳಿಕೆಯಲ್ಲಿ ಉಲ್ಟಾ ಹೊಡೆದ ಸಚಿವ ರಾಮಲಿಂಗಾ ರೆಡ್ಡಿ

ಮಂಗಳೂರು: ಶಿವಮೊಗ್ಗ ಪ್ರಕರಣ ಹೇಳಿಕೆಯಲ್ಲಿ ಉಲ್ಟಾ ಹೊಡೆದ ಸಚಿವ ರಾಮಲಿಂಗಾ ರೆಡ್ಡಿ


ಮಂಗಳೂರು: ಶಿವಮೊಗ್ಗ ಪ್ರಕರಣದ ಬಗ್ಗೆ  ತಾನು ಬಿಜೆಪಿ ವೇಷ ಮರೆಸಿ ಮಾಡುತ್ತದೆ ಎಂದು ಹೇಳಿದ್ದು ಹಳೆಯ ಘಟನೆಗಳ ವಿಚಾರವನ್ನು ಉದ್ದೇಶಿಸಿಯೇ ಹೊರತು,  ಶಿವಮೊಗ್ಗ ಪ್ರಕರಣವನ್ನು ಆಧರಿಸಿ ಹೇಳಿಲ್ಲ ಎಂದು ತಮ್ಮ ಹೇಳಿಕೆಯ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಲ್ಟಾ ಹೊಡೆದಿದ್ದಾರೆ.

ಮಂಗಳೂರು ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಜನರಲ್ ಆಗಿ ಯಾವ ರೀತಿ ಮಾಡುತ್ತಾರೆ ಎಂದು ಹೇಳಿದ್ದೇನೆ ಅಷ್ಟೇ. ಆದರೆ ಆ ರೀತಿ ನಾನು ಹೇಳಿಲ್ಲ. ಶಿವಮೊಗ್ಗದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮವಾಗಲಿ. ಅವರು ಸಾಮಾನ್ಯವಾಗಿ ಆ ರೀತಿ ಮಾಡುತ್ತಾರೆ ಎಂದಿದ್ದೇನೆ. ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳಲಿ. ಶಿವಮೊಗ್ಗ ಮತ್ತು ನನ್ನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ ಎಂದರು.

ಹಿಂದೆ ಪುಲಿಕೇಶಿ ನಗರ ಗಲಾಟೆಯಲ್ಲೂ ನಾನು ಅದನ್ನೇ ಹೇಳಿದ್ದೆ. ನಾನು ಗೃಹಮಂತ್ರಿ ಆಗಿದ್ದವನು, ನನಗೆ ಕಾನೂನು ಗೊತ್ತಿಲ್ವಾ?. ರೈತರು, ಕನ್ನಡಪರ ಹೋರಾಟಗಾರು ಹಾಗೂ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರ ಕೇಸ್ ವಾಪಾಸ್ ಪಡೆಯುತ್ತೇವೆ. ಆಸ್ತಿ ಪಾಸ್ತಿ ನಷ್ಟ ಆಗದೆ, ಪೊಲೀಸ್ ಮೇಲೆ ಹಲ್ಲೆಗಳಾಗದ ಕೇಸ್ ಗಳನ್ನು ಮಾತ್ರ ನಾವು ವಾಪಸ್ ಪಡೆಯಲು ಶಿಫಾರಸ್ಸು ಮಾಡುತ್ತೇವೆ‌. ಅದು ಬಿಟ್ಟರೆ ಕೋಮುಗಲಭೆ ಕೇಸ್ ಗಳಲ್ಲಿ ಶಿಫಾರಸ್ಸು ಮಾಡಲ್ಲ ಎಂದು ರಾಮಲಿಂಗ ರೆಡ್ಡಿ ಹೇಳಿದರು.

ಶಾಸಕ ಚನ್ನಬಸಪ್ಪ ಹೇಳಿಕೆಗೆ ತಿರುಗೇಟು ನೀಡಿದ ರಾಮಲಿಂಗಾ ರೆಡ್ಡಿ, ನನಗೆ ತಾಕತ್ತಿದೆಯೋ ಇಲ್ವೋ ಎಂದು ಅವನಿಗೆ ಏನ್ ಗೊತ್ತು?. ನನಗೆ ಏಕವಚನದಲ್ಲಿ ಬೈಯ್ಯೋಕೆ ಗೊತ್ತಿಲ್ವಾ? ಆದ್ರೆ ನಾನು ಬೈಯ್ಯೋಕೆ ಹೋಗಲ್ಲ. ಮಾತಿನ ಗೌರವ, ರೀತಿ ವಿಧಾನ ಗೊತ್ತಿಲ್ಲಾಂದರೆ ನಾನು ಹಾಗೆ ಮಾಡಲು ಆಗಲ್ಲ. ಅವರ ಮಟ್ಟಕ್ಕೆ ನಾವು ಇಳಿಯೋಕೆ ಆಗಲ್ಲ ಎಂದು ಹೇಳಿದರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article