ಉಜಿರೆ: ಕ್ಷುಲ್ಲಕ ಕಾರಣಕ್ಕೆ ಇರಿದು ಪುತ್ರನ ಕೊಲೆ ಮಾಡಿದ ತಂದೆ

ಉಜಿರೆ: ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಇರಿದು ಕೊಲೆ ಮಾಡಿರುವ ಘಟನೆ ಉಜಿರೆ ಗ್ರಾಮದ ಕೊಡೆಕಲ್ಲು ಎಂಬಲ್ಲಿ ರವಿವಾರ ರಾತ್ರಿ ಸಂಭವಿಸಿದೆ.

ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಜಗದೀಶ್(30) ಮೃತಪಟ್ಟ ವ್ಯಕ್ತಿ. ಮೃತನ ತಂದೆ ಕೃಷ್ಣಯ್ಯ ಆಚಾರ್ ಎಂಬಾತನೇ ಕೊಲೆ ಆರೋಪಿ.

ರವಿವಾರ ರಾತ್ರಿ ತಂದೆ ಹಾಗೂ ಮಗನ ನಡುವೆ ಸಣ್ಣ ಮಾತಿನ ಜಗಳ ನಡೆದಿದೆ. ಇದಾದ ಬಳಿಕ ಕೃಷ್ಣಯ್ಯ ಆಚಾರ್ ಅವದು ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದಾರೆ. ಈ ವೇಳೆ ಜಗದೀಶ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಯತ್ನಿಸಿದ್ದಾನೆ. ಆಗ ಬಾಗಿಲು ತೆಗೆದ ಕೃಷ್ಣಯ್ಯ ಆಚಾರ್ ಕೋಣೆಯಿಂದ ಹೊರಬಂದು ಜಗದೀಶನಿಗೆ ಚೂರಿಯಿಂದ ಇರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಚೂರಿ ಇರಿತಕ್ಕೊಳಗಾಗಿ ಕುಸಿದು ಬಿದ್ದು ಜಗದೀಶ್ ಮೃತಪಟ್ಟಿದ್ದಾನೆ. ಈ ಬಗ್ಗೆ ಜಗದೀಶನ ಅಣ್ಣ ಗಣೇಶ್ ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.