ತೆರೆದ ಬಾಗಿಲು, ಬಾರದ ಲಿಫ್ಟ್: ನಾಲ್ಕನೇ ಅಂತಸ್ತಿನಿಂದ ಲಿಫ್ಟ್ ಗುಂಡಿಗೆ ಬಿದ್ದು ವ್ಯಕ್ತಿ ಸಾವು

ರಾಂಚಿ: ಲಿಫ್ಟ್ ಗುಂಡಿ ಒತ್ತಿದಾಗ ಬಾಗಿಲು ತೆರೆದಿದ್ದು, ಲಿಫ್ಟ್ ಬಂದಿದೆ ಎಂದು ಭಾವಿಸಿ ಒಳಗೆ ಕಾಲಿಟ್ಟ ವ್ಯಕ್ತಿಯೊಬ್ಬರು ನಾಲ್ಕನೇ ಅಂತಸ್ತಿನಿಂದ ಲಿಫ್ಟ್ ಗುಂಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆಯೊಂದು ರಾಂಚಿಯಲ್ಲಿ ಸಂಭವಿಸಿದೆ.

ಶೈಲೇಶ್ ಕುಮಾರ್ ಮೃತಪಟ್ಟ ವ್ಯಕ್ತಿ. ಅವರು ನಾಲ್ಕನೇ ಅಂತಸ್ತಿನಿಂದ ನೆಲಅಂತಸ್ತಿಗೆ ಹೋಗಲು ಲಿಫ್ಟ್ ಗುಂಡಿ ಒತ್ತಿದ್ದಾರೆ. ಬಾಗಿಲು ತೆರೆದುಕೊಂಡಿದೆ. ಆದರೆ ಲಿಫ್ಟ್ ಫ್ಯಾಟ್‌ಫಾರ್ಮ್ ಇನ್ನೂ ಬಂದಿರಲಿಲ್ಲ. ಇದನ್ನು ಗಮನಿಸದ ಆತ ಒಳ ಪ್ರವೇಶಿಸಿದ್ದಾರೆ. ಆದರೆ ಫ್ಲ್ಯಾಟ್ ಫಾರ್ಮ್ ಇಲ್ಲದೆ ಆತ ನೇರವಾಗಿ ತಳ ಅಂತಸ್ತಿನಲ್ಲಿಯ ಲಿಫ್ಟ್ ಗುಂಡಿಗೆ ಬಿದ್ದಿದ್ದಾರೆ. ಭಾರೀ ಶಬ್ದವನ್ನು ಕೇಳಿದ ಅಲ್ಲಿದ್ದವರು ಧಾವಿಸಿ ಬಂದರಾದರೂ ಆ ವೇಳೆಗಾಗಲೇ ಶೈಲೇಶ್ ಕೊನೆಯುಸಿರೆಳೆದಿದ್ದರು ಎಂದು ಪೋಲಿಸರು ತಿಳಿಸಿದರು.

ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
BREAKING NEWS
Loading latest news...
Join our WhatsApp Channel Powered By : Online Pudu