-->
1000938341
ಸ್ಟಂಟ್ ಪ್ರದರ್ಶನ ವೇಳೆ ಭಾರಿ ಅನಾಹುತ: ಸ್ಟಂಟ್ ಮ್ಯಾನ್ ಟ್ರ್ಯಾಕ್ಟರ್ ನಡಿ ಸಿಲುಕಿ ದಾರುಣ ಸಾವು

ಸ್ಟಂಟ್ ಪ್ರದರ್ಶನ ವೇಳೆ ಭಾರಿ ಅನಾಹುತ: ಸ್ಟಂಟ್ ಮ್ಯಾನ್ ಟ್ರ್ಯಾಕ್ಟರ್ ನಡಿ ಸಿಲುಕಿ ದಾರುಣ ಸಾವು


ಪಂಜಾಬ್: ಜಾತ್ರೆಯ ವೇಳೆ ಏರ್ಪಡಿಸಿದ್ದ ಅಖಾಡವೊಂದರಲ್ಲಿ ತನ್ನ ಟ್ರ್ಯಾಕ್ಟರ್ ನಲ್ಲಿ ಸ್ಟಂಟ್ ಪ್ರದರ್ಶಿಸುತ್ತಿದ್ದ 29ರ ಸ್ಟಂಟ್‌ಮ್ಯಾನ್‌, ಆಯಾತಪ್ಪಿ ವಾಹನ ಚಕ್ರದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಪಂಜಾಬ್‌ನ ಗುರುದಾಸ್‌ಪುರದ ಬಟಾಲಾದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಸುಖಮನ್‌ದೀಪ್ ಸಿಂಗ್ ಮೃತಪಟ್ಟ ಸ್ಟಂಟ್‌ಮ್ಯಾನ್. ಜಾತ್ರೆಯಲ್ಲಿ ತಮ್ಮ ಟ್ರ್ಯಾಕ್ಟರ್​ ಬಳಸಿಕೊಂಡು ಮಾಡುತ್ತಿದ್ದ ಸಾಹಸ ಪ್ರದರ್ಶನ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.


ಸರಚೂರು ಗ್ರಾಮದ ಕ್ರೀಡಾ ಮೈದಾನದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಸಾಹಸ ಪ್ರದರ್ಶಿಸಲು ಸುಖಮನ್‌ದೀಪ್ ಸಿಂಗ್ ತಮ್ಮ ಟ್ರ್ಯಾಕ್ಟರ್‌ನೊಂದಿಗೆ ಆಗಮಿಸಿದ್ದರು. ಸ್ಟಂಟ್​ ಮಾಡುತ್ತಿದ್ದಾಗ ಟ್ರ್ಯಾಕ್ಟರ್‌ನ ಮುಂಭಾಗದ ಚಕ್ರಗಳನ್ನು ಮೇಲಕ್ಕೆತ್ತಿ, ಹಿಂಬದಿಯ ಟೈರ್‌ಗಳನ್ನು ನೆಲದ ಮೇಲೆ ಒತ್ತಿದ್ದಾರೆ. ತದನಂತರ ಟ್ರ್ಯಾಕ್ಟರ್‌ ನೊಂದಿಗೆ ಓಡಿದ್ದಾರೆ.

ಆದರೆ ಈ ಸಾಹಸದ ವೇಳೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಜನರತ್ತ ಸಂಚರಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಸುಖಮನ್‌ದೀಪ್ ಟ್ರ್ಯಾಕ್ಟರ್ ಅನ್ನು ನಿಯಂತ್ರಿಸಲು ಟ್ರ್ಯಾಕ್ಟರ್ ಬಳಿ ಬಂದಾಗ, ಆಯಾತಪ್ಪಿ ಚಕ್ರದಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸಮೀಪದಲ್ಲೇ ಇದ್ದ ಇಬ್ಬರು ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಸುಖಮನ್‌ದೀಪ್ ಸಿಂಗ್ ರನ್ನು ಬಿಡಿಸಲು ಯತ್ನಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಈ ದುರಂತ ಸಂಭವಿಸಿದ ಕೂಡಲೇ ಜಾತ್ರೆ ಆಯೋಜಿಸಿದ್ದ ಆಡಳಿತವು ಮೇಳವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿತು. ಫತೇಘರ್ ಚುರಿಯನ್ ನಿವಾಸಿಯಾದ ಸುಖಮನ್‌ದೀಪ್ ಸಿಂಗ್, ಅವರ ಪೋಷಕರ ಏಕೈಕ ಪುತ್ರನಾಗಿದ್ದು, ರೈತರ ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಘಟನೆಯಲ್ಲಿ ಸಾವಿಗೀಡಾದ ಸುಖಮನ್‌ದೀಪ್ ಅವರನ್ನು ನೆನೆದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article