-->
1000938341
ಮಂಗಳೂರು: ಇದು ಹಿಂದೂಗಳು ಒಗ್ಗಟ್ಟಾಗಿ ಶೌರ್ಯ ತೋರಿಸಬೇಕಾದ ಕಾಲ - ಸೂಲಿಬೆಲೆ

ಮಂಗಳೂರು: ಇದು ಹಿಂದೂಗಳು ಒಗ್ಗಟ್ಟಾಗಿ ಶೌರ್ಯ ತೋರಿಸಬೇಕಾದ ಕಾಲ - ಸೂಲಿಬೆಲೆ

ಮಂಗಳೂರು: ಮುಂದಿನ ಆರು ತಿಂಗಳು ಬಹಳ ನಿರ್ಣಾಯಕವಾದ ಕಾಲವಾಗಿದೆ. ಇಸ್ರೇಲ್ ನಲ್ಲಿ ಏನಾಗಿತ್ತೋ ಅದು ಭಾರತದಲ್ಲಿ ನಡೆಯಬೇಕಿತ್ತು. ಆದರೆ ಪುಣ್ಯಕ್ಕೆ ನಮ್ಮ ದೇಶದ ಗುಪ್ತಚರ ಇಲಾಖೆ ಅದನ್ನು ಪತ್ತೆ ಹಚ್ಚಿ ದೊಡ್ಡ ಗಂಡಾಂತರವನ್ನು ತಪ್ಪಿಸಿದೆ‌‌. ಆದ್ದರಿಂದ ಇದು ಹಿಂದೂಗಳು ಒಗ್ಗಟ್ಟಾಗಿ ಶೌರ್ಯ ತೋರಿಸಬೇಕಾದ ಕಾಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ವಿಎಚ್ ಪಿ ಷಷ್ಠಿಪೂರ್ತಿಯ ಅಂಗವಾಗಿ ಮಂಗಳೂರಿಗೆ ಆಗಮಿಸಿರುವ ಶೌರ್ಯ ಜಾಗರಣ ರಥಯಾತ್ರೆಯ ಹಿನ್ನಲೆಯಲ್ಲಿ ನಗರದ ಕದ್ರಿ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ರಾಜಸ್ಥಾನ ಬಾರ್ಡರ್ ನಲ್ಲಿ 
ಭಾರತದ ಸೈನಿಕರ ಹೊಚ್ಚಹೊಸ ಬಟ್ಟೆಗಳು ಕಾರಿನಲ್ಲಿ ದೊರೆತಿದೆ. ಸೈನಿಕರ ವೇಷದಲ್ಲಿ ಹೇಗೆ ಇಸ್ರೇಲ್ ಗೆ ನುಗ್ಗಿದರೋ ಅದೇ ಮಾದರಿಯಲ್ಲಿ ಭಾರತದಲ್ಲೂ ಮಾಡಲು ಉದ್ದೇಶಿಸಿದ್ದರು. ಏನಾದರೂ ಆದಲ್ಲಿ ನಮ್ಮ ಪಕ್ಕದಲ್ಲಿ ಇರುವವರೇ ಈ ದೇಶದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ. ಬಹಳ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಈ ಕಾಲದಲ್ಲಿದೆ. ನಾವು ಯಾರ ಮೇಲೂ ಖಡ್ಗ ಎತ್ತಬೇಕಾಗಿಲ್ಲ. ಆದರೆ ಖಡ್ಗ ಎತ್ತಬೇಕಾದ ಸಂದರ್ಭ ಅಂಜುವ ಜನರು ನಾವಲ್ಲ ಎಂಬ ಸಮರ್ಥ ಸಂದೇಶ ಇವತ್ತಿನ‌ ಈ ವೇದಿಕೆಯಿಂದ ಕೊಡಬೇಕಾಗಿದೆ. ಆ ಕಾರಣಕ್ಕೆ ಶೌರ್ಯ ಜಾಗರಣ ರಥಯಾತ್ರೆ ನಿಜಕ್ಕೂ ಯಶಸ್ವಿ ಎಂದು ಹೇಳಿದರು.

2050ರಲ್ಲಿ ಮೂವತ್ತು ಕೋಟಿ ಮುಸ್ಲಿಂ ಜನಸಂಖ್ಯೆಯನ್ನು ಏರಿಸುವ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆ. ಹಿಂದೂಗಳು ಏನೇ ಮಾಡಿದ್ರೂ ಮುಗಿ ಬೀಳುವ ರಾಜ್ಯದ ಮಾವೋವಾದಿಗಳು ಮುಸ್ಲಿಮರು ತಪ್ಪು ಮಾಡಿದಲ್ಲಿ ಕವರ್ ಮಾಡುತ್ತಾರೆ. ಲವ್ ಜಿಹಾದ್ ನಡೆಸಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡುವ ಮುಸ್ಲಿಮರು ತರುಣರಿಗೆ ಡ್ರಗ್ಸ್ ನೀಡಿ ಹಾಳು ಮಾಡುತ್ತಿದ್ದಾರೆ.

ಕಳೆದ ಐದು ಶತಕದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಬೇಕು ಎಂದು ಹೋರಾಟ ಮಾಡಿದ್ದೇವೆ. ಈ ರಾಮಮಂದಿರ ಕೆಡವಿದರೆ, ಮೂರ್ತಿ ಮುರಿದರೆ ರಾಮ ಕಳೆದು ಹೋಗುತ್ತಾನೆಂದು ಬಾಬರ್ ತಿಳಿದುಕೊಂಡಿದ್ದ. ಮೂರ್ತಿಯನ್ನು ಅವನು ಕೆಡವಬಹುದು. ಆದರೆ ಜನರ ಹೃದಯಲ್ಲಿರುವ ರಾಮನನ್ನು ಅದು ಹೇಗೆ ತೆಗೆದುಹಾಕುತ್ತಾನೆ. ಈ ದೇಶದ ಜನರು ಐನ್ನೂರು ವರ್ಷಗಳ ಕಾಲ ರಾಮನನ್ನು ಹೃದಯದಲ್ಲಿಟ್ಟರು‌. ಆದರೆ 1992 ಡಿಸೆಂಬರ್ 6ರಂದು ವಿಎಚ್ ಪಿ ಹಾಗೂ ಬಜರಂಗದಳದ ನಿಜವಾದ ಶೌರ್ಯ ಜಾಗರಣ ರಥಯಾತ್ರೆ ಮೆರೆದರು. ಆ ಬಳಿಕ ಕೋರ್ಟ್ ಹೇಳಿದಂತೆ ಪುರಾತತ್ವ ಇಲಾಖೆಯಿಂದ ಕಟ್ಟಡದ ಅಡಿಭಾಗ ಶೋಧಿಸಲಾಯಿತು. ಅದರಡಿಭಾಗದಲ್ಲಿ ದೇವಾಲಯ ಇತ್ತು ಎಂದಲ್ಲಿ ಈ ದೇಶದಲ್ಲಿ ನಡೆಯುವ ದಂಗೆಯನ್ನು ತಡೆಯುವವರು ಯಾರು‌. ಆದರೆ ಮೋದಿ, ಯೋಗಿ ಅದನ್ನು ಸಮರ್ಥವಾಗಿ ನಿಭಾಯಿಸಿದರು. ಜನವರಿ 24ರ ಬಳಿಕ ವೈಭವದಿಂದ ರಾಮಮಂದಿರದ ಉದ್ಘಾಟನೆ ಆಗುತ್ತಲ್ಲ. ಆ ದಿನ ಬರೀ ಸ್ವಾಭಿಮಾನದ ದಿವಸವಲ್ಲ. ಇದು ಹಿಂದೂ ಪುನರುತ್ಥಾನದ ದಿವಸ ಎಂದು ಸೂಲಿಬೆಲೆ ಹೇಳಿದರು.


Ads on article

Advertise in articles 1

advertising articles 2

Advertise under the article