-->
ಮಂಗಳೂರು: ಹೆತ್ತತಾಯಿಯ ಹತ್ಯೆ ಆರೋಪ - ಪುತ್ರ ಅರೆಸ್ಟ್

ಮಂಗಳೂರು: ಹೆತ್ತತಾಯಿಯ ಹತ್ಯೆ ಆರೋಪ - ಪುತ್ರ ಅರೆಸ್ಟ್

ಮಂಗಳೂರು: ಹೆತ್ತತಾಯಿಯನ್ನೇ ಹತ್ಯೆ ಮಾಡಿರುವ ಆರೋಪದಲ್ಲಿ ಪುತ್ರನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದುರ್ಗಾನಗರ ರತ್ನಾ ಶೆಟ್ಟಿ (60) ಮೃತಪಟ್ಟವರು. ಅವರು ಮನೆಯ ಕೋಣೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಇದೀಗ ಕೊಲೆ ಆರೋಪದ ಮೇಲೆ ರತ್ನಾ ಶೆಟ್ಟಿಯವರ ಪುತ್ರ ರವಿರಾಜ್ ಶೆಟ್ಟಿ(33)ಯನ್ನು ಬಜ್ಜೆ ಪೊಲೀಸರು ಬಂಧಿಸಿದ್ದಾರೆ.

ರತ್ನಾ ಶೆಟ್ಟಿಯವರು ಕಟೀಲು ದುರ್ಗಾನಗರದ ಬಾಲಕೃಷ್ಣರವರ ಮನೆಯ ಬದಿಯ ಕೋಣೆಯಲ್ಲಿ ಪುತ್ರ ರವಿರಾಜ್ ರೊಂದಿಗೆ ವಾಸ್ತವ್ಯವಿದ್ದರು. ಅವರು ಗಿಡಿಗೆರೆ ಚರ್ಚ್ ಬಳಿಯ ಬಾಲಕೃಷ್ಣರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಹೋಗಿರಲಿಲ್ಲ. ಈ ನಡುವೆ ಪುತ್ರ ರವಿರಾಜ್ ಶೆಟ್ಟಿ ತಾಯಿಯೊಂದಿಗೆ ವಾಸ್ತವ್ಯವಿದ್ದ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾನೆ.

ರವಿವಾರ ಬೆಳಗ್ಗೆ ಮನೆಯ ಪರಿಸರದಲ್ಲಿ ವಾಸನೆ ಬರುತ್ತಿದದ್ದನ್ನು ಕಂಡು ಅನುಮಾನದಿಂದ ಮನೆಯ ಮಾಲಕರು ಮಹಿಳೆ ವಾಸ್ತವ್ಯವಿದ್ದ ಕೋಣೆಯ ಕಿಟಕಿಯಲ್ಲಿ ನೋಡಿದ್ದಾರೆ. ಆಗ ಮಹಿಳೆಯ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದು, ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ ತಾಯಿಯ ಮೃತದೇಹ ಪತ್ತೆಯಾದ ಬಗ್ಗೆ ಸ್ಥಳೀಯರಿಗೆ ಮಾಹಿತಿ ಬಂದ ತಕ್ಷಣ ಪುತ್ರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿ ರವಿರಾಜ್ ಶೆಟ್ಟಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article