ವಿಮಾನದಲ್ಲಿ ಪೈಲಟ್ ನಿಂದ ವಿದ್ಯಾರ್ಥಿನಿಗೆ ಕಿರುಕುಳ


ಬೆಂಗಳೂರು: ಇಲ್ಲಿಂದ ಪುಣೆಗೆ ತೆರಳುತ್ತಿದ್ದ ವಿಮಾನದಲ್ಲಿ 20ರ ವಿದ್ಯಾರ್ಥಿನಿಗೆ ಕರ್ತವ್ಯದಲ್ಲಿಲ್ಲದ ಪೈಲಟ್ ಕಿರುಕುಳ ನೀಡಿದ್ದಾಗಿ ಆರೋಪ ಕೇಳಿ ಬಂದಿದೆ. ಆಕಾಶ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಮಾನ ಸಿಬ್ಬಂದಿ ಹಾಗೂ ವಿಮಾನಯಾನ ಸಂಸ್ಥೆಗೆ ನೀಡಿದ ದೂರಿನಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕೆ ಆರೋಪಿಸಿದ್ದಾರೆ.

ಈ ಪೈಲಟ್ ತನ್ನನ್ನು ಆಸನ ಬದಲಿಸುವಂತೆ ಒತ್ತಾಯಿಸಿದ್ದಾನೆ. ಬಳಿಕ ತನ್ನ ಸೀಟಿನ ಪಕ್ಕಕ್ಕೆ ಕರೆಸಿಕೊಂಡು ಮದ್ಯ ಸೇವಿಸುತ್ತಿದ್ದ ಪೈಲಟ್ ವಿದ್ಯಾರ್ಥಿನಿಗೂ ಮದ್ಯ ಸೇವಿಸುವಂತೆ ಕೇಳಿದ್ದಾನೆ ಎನ್ನಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ಅಕ್ಟೋಬರ್ 1ರಂದು ನಡೆದಿದೆ ಎನ್ನಲಾದ ಘಟನೆ ಬಗ್ಗೆ ವಿವರ ಪಡೆಯಲು ಯುವತಿ ಲಭ್ಯರಿಲ್ಲದ ಹಿನ್ನೆಲೆಯಲ್ಲಿ ತನಿಖೆಗೆ ತಡೆ ಉಂಟಾಗಿದೆ ಎನ್ನುವುದು ಆಕಾಶ ಏರ್ ಸಂಸ್ಥೆಯ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಡಿದ ಪೋಸ್ಟ್ ಗೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿತ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ಇದಕ್ಕೆ ವಿಮಾನಯಾನ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು, ಆ ಬಳಿಕ ವಿಮಾನಯಾನ ಸಂಸ್ಥೆಯ ಯಾರೂ ಸಂಪರ್ಕಿಸಿಲ್ಲ ಎಂದು ವಿದ್ಯಾರ್ಥಿನಿ ದೂರಿದ್ದಾರೆ.

ತಾನು ವಿಮಾನದ ಹಿಂಭಾಗದಲ್ಲಿ 32ಸಿ ಆಸನದಲ್ಲಿ ಕುಳಿತಿದ್ದೆ. ನನ್ನ ಲಗೇಜ್ ಕ್ಯಾಬಿನ್ ನಲ್ಲಿ ಇಡುವಾಗ  ನೆರವಾಗುವ ನೆಪದಲ್ಲಿ ಸುಮಾರು 30 ವರ್ಷದ ವ್ಯಕ್ತಿ ಮಾತನಾಡಲು ಆರಂಭಿಸಿದ್ದಾನೆ. ಈತ ಆಕಾಶ ಏರ್ ಸಂಸ್ಥೆಯ ಆಫ್ ಡ್ಯೂಟಿ ಪೈಲಟ್ ಎಂದು ಪರಿಚಯಿಸಿಕೊಂಡಿದ್ದಾನೆ. ಏರ್ಲೈನ್ ಐಡಿ ಕಾರ್ಡ್ ಕೂಡಾ ಕಂಡಿದೆ' ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಹೇಳಿದ್ದಾರೆ. ವಿಮಾನದ ಹಿಂಭಾಗಕ್ಕೆ ಬರುವಂತೆ ಸಿಬ್ಬಂದಿಯ ಮೂಲಕ ಸೂಚಿಸಿದ್ದ. ಆ ಬಳಿಕ ಕಿರುಕುಳ ನೀಡಿದ್ದಾನೆ ಎಂದು ಆಕೆ ದೂರಿದ್ದಾಳೆ
BREAKING NEWS
Loading latest news...
Join our WhatsApp Channel Powered By : Online Pudu