ಮಂಗಳೂರು: ಅತಿವೇಗದ ಚಾಲನೆಯಲ್ಲಿ ಹೊಂಡಕ್ಕಿಳಿದ ಕಾರು ಹೊಂಡಕ್ಕೆ - ಚಾಲಕನಿಗೆ 3,000 ರೂ. ದಂಡ
Thursday, October 19, 2023
ಮಂಗಳೂರು: ಅತಿವೇಗದಲ್ಲಿ ಚಲಾಯಿಸಿಕೊಂಡು ಬಂದಿರುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಹೊಂಡಕ್ಕಿಳಿದ ಘಟನೆ ನಗರದ ಹೊರವಲಯದ ಗುರುಪುರದ ಬಳಿ ನಡೆದಿದೆ.
ಬಂಟ್ವಾಳ ಕೈಕಂಬ ಜೋಡುಮಾರ್ಗ ನಿವಾಸಿ ಪಿ.ಎಸ್.ಮೊಹಮ್ಮದ್ ಅತಿವೇಗದಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಅವರು ಗುರುಪುರ ತಲುಪುತ್ತಿದ್ದಂತೆ ಕಾರು ರಸ್ತೆ ತೊರೆದು ಅತಿ ವೇಗದಿಂದ ರಸ್ತೆ ಬದಿಯ ಹೊಂಡಕ್ಕಿಳಿದಿದೆ. ಆದರೆ ಕಾರಿನಲ್ಲಿದ್ದವರಿಗೆ ಏನೂ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎದೆ ಝಲ್ಲೆನಿಸುವ ಈ ಸಂಪೂರ್ಣ ಘಟನೆಯು 8ಸೆಕೆಂಡ್ ನ ವೀಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಅಕ್ಟೋಬರ್ 15ರಂದು ನಡೆದಿದ್ದು, ಇಂದು ವೀಡಿಯೋ ವೈರಲ್ ಆಗಿದೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಜ್ಪೆ ಠಾಣಾ ಪೊಲೀಸರು ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿ ವಾಹನ ಚಾಲಕನಿಗೆ 3 ಸಾವಿರ ರೂ. ದಂಡ ವಿಧಿಸಿದ್ದಾರೆ.