30 ವರ್ಷಗಳ ನಂತರ ಸಮಾಸಪ್ತಮ ಮತ್ತು ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವು ಶುಭ ಯೋಗವಾಗಿದೆ. ಈ ಯೋಗದಿಂದಾಗಿ ಕೆಲ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಕೇಂದ್ರ ತ್ರಿಕೋನ ರಾಜಯೋಗದಿಂದ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಬಹಳ ದಿನಗಳಿಂದ ಕೈ ಸೇರದ ಹಣವು ಈ ಯೋಗಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ವ್ಯಾಪಾರಿಗಳು ಹೊಸ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗದಿಂದ ಶುಭವಾಗಲಿದೆ. ಇಲ್ಲಿಯವರೆಗೂ ಇದ್ದ ಸಮಸ್ಯೆಗಳು ದೂರವಾಗಿ ಭಾಗ್ಯಗಳು ಬೆಳಗಲಿವೆ. ಪಿತ್ರಾರ್ಜಿತ ಆಸ್ತಿ ಉತ್ತಮ ಲಾಭವನ್ನು ನೀಡುತ್ತದೆ. ಹಣದ ವಹಿವಾಟಿನಿಂದ ಅಧಿಕ ಲಾಭ ಸಿಗುವ ಸಾಧ್ಯತೆ ಇದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗ ಅನೇಕ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಬುದ್ಧಿವಂತಿಕೆಯಿಂದ ನೀವು ಸಾಕಷ್ಟು ಹಣವನ್ನು ಗಳಿಸುವಿರಿ. ಈ ಅವಧಿಯಲ್ಲಿ ನಿಮ್ಮ ಸುದೀರ್ಘ ಪರಿಶ್ರಮವು ಪ್ರತಿಫಲವನ್ನು ಪಡೆಯುತ್ತದೆ. ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗವು ಆರ್ಥಿಕವಾಗಿ ತುಂಬಾ ಒಳ್ಳೆಯದು. ನೀವು ಅನಿರೀಕ್ಷಿತ ಸ್ಥಳದಿಂದ ಹಣವನ್ನು ಸ್ವೀಕರಿಸಬಹುದು. ವೃತ್ತಿಪರವಾಗಿ ಈ ಯೋಗವು ಉತ್ತಮ ಪ್ರಗತಿ ಮತ್ತು ಲಾಭವನ್ನು ನೀಡುತ್ತದೆ.