ಪ್ರಸ್ತುತ ದೇವಗುರು ಬೃಹಸ್ಪತಿ ಡಿಸೆಂಬರ್ 31, 2023 ರಂದು ತನ್ನ ನೆರನಡೆಯನ್ನು ಅನುಸರಿಸಲಿದ್ದು, ಇದು 3 ರಾಶಿಗಳ ಜನರಿಗೆ ವರ್ಷ 2024ರ ಆರಂಭದಲ್ಲಿಯೇ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗವನ್ನು ರಚಿಸಲಿದೆ.
ಕರ್ಕ ರಾಶಿ: ಗುರು ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ನೇರ ನಡೆ ಅನುಸರಿಸುವ ಕಾರಣ ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದ ಸಂಪನ್ಮೂಲಗಳಲ್ಲಿ ವೃದ್ಧಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರ ಹಾಗೂ ವೃತ್ತಿ ಜೀವನದಲ್ಲಿ ನಿಮಗೆ ಉತ್ತಮ ಧನಲಾಭ ಉಂಟಾಗಲಿದೆ.
ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಗುರು ತನ್ನ ನೆರನಡೆಯ ಮೂಲಕ ಸಂಚರಿಸಲಿದ್ದಾನೆ ಇದರಿಂದ ನಿಮ್ಮ ಭಾಗ್ಯೋದಯವಾಗುವ ಎಲ್ಲಾ ಸಾಧ್ಯತೆಗಳಿವೆ. ಧರ್ಮ-ಕರ್ಮ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಮನೆ-ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರುವ ಸಾಧ್ಯತೆ ಇದೆ.
ಧನು ರಾಶಿ: ಗಜಲಕ್ಷ್ಮಿ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಗಿತಾಗಲಿದೆ. ಗುರು ನಿಮ್ಮ ಜಾತಕಕ್ಕೆ ಅಧಿಪತಿಯಾದ ಕಾರಣ, ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಸಿಗುವ ಸಾಧ್ಯತೆ ಇದೆ. ಆತ ನಿಮ್ಮ ಗೋಚರ ಜಾತಕದ ಚತುರ್ಥ ಭಾವಕ್ಕೆ ಅಧಿಪತಿಯಾದ ಕಾರಣ ಮಕ್ಕಳ ನೌಕರಿ ಅಥವಾ ವಿವಾಹ ನೆರವೇರುವ ಸಾಧ್ಯತೆ ಇದೆ.