ಬೆಂಗಳೂರು ಬೆನ್ನಲ್ಲೇ ತಮಿಳುನಾಡಿನ ಎರಡು ಪಟಾಕಿ ಕಾರ್ಖಾನೆಗಳಲ್ಲಿ ಸ್ಪೋಟ - 10ಮಂದಿ ಸಜೀವ ದಹನ, 15ಕ್ಕೂ ಅಧಿಕ ಕಾರ್ಮಿಕರು ಗಂಭೀರ


ಶಿವಕಾಶಿ: ಬೆಂಗಳೂರಿನ ಅತ್ತಿಬೆಲೆ ಬೆನ್ನಲ್ಲೇ ಪಟಾಕಿ ತಯಾರಿಕೆಗೆ ಪ್ರಖ್ಯಾತಿ ಹೊಂದಿರುವ ತಮಿಳುನಾಡಿನ ಶಿವಕಾಶಿಯ ಎರಡು ಪಟಾಕಿ ಕಾರ್ಖಾನೆಗಳಲ್ಲಿ ಮಂಗಳವಾರ ಸಂಭವಿಸಿರುವ ಭೀಕರ ಸ್ಪೋಟದಲ್ಲಿ 10 ಮಂದಿ ಸಜೀವ ದಹನಗೊಂಡಿದ್ದಾರೆ. ಅಲ್ಲದೆ 15ಕ್ಕೂ ಅಧಿಕ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. 

ವಿರುಧುನಗರ ಸಮೀಪದ ಶಿವಕಾಶಿಯಲ್ಲಿ ಎರಡು ಪ್ರತ್ಯೇಕ ಸ್ಪೋಟ ಸಂಭವಿಸಿವೆ. ಬೂದುಪಟ್ಟಿ ರಂಗಪಾಳ್ಯಂ ಪ್ರದೇಶದಲ್ಲಿರುವ ಕಾನಿಷರ್ ಪಟಾಕಿ ಕಾರ್ಖಾನೆಯಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ 9 ಮಂದಿ ಸುಟ್ಟು ಕರಕಲಾಗಿದ್ದಾರೆ. ಘಟನೆಯ ಪ್ರದೇಶ ಸುತ್ತ ದೊಡ್ಡ ಸ್ಫೋಟಕ ಸದ್ದು ಕೇಳಿಬಂದಿತು. ಬೆಂಕಿಗೆ ಕೆನ್ನಾಲಿಗೆಗೆ ಸಿಲುಕಿದ ಕೆಲ ಕಾರ್ಮಿಕರು ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇನ್ನೊಂದು ಸ್ಫೋಟವು ರೆಡ್ಡಿಪಟ್ಟಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದೆ. ಇಲ್ಲಿ ಓರ್ವ ಕಾರ್ಮಿಕ ಬೆಂಕಿಗಾಹುತಿಯಾಗಿದ್ದಾನೆ. ಕೆಲ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu