-->
ಕಿನ್ನಿಗೋಳಿ: ನಾಗರಹಾವಿಗೆ ಡೀಸೆಲ್ ಎರಚಿ ನರಳುವಂತೆ ಮಾಡಿದ ಕಾವಲುಗಾರ - ಮೈಯುರಿಯಿಂದ ನರಳಿದ

ಕಿನ್ನಿಗೋಳಿ: ನಾಗರಹಾವಿಗೆ ಡೀಸೆಲ್ ಎರಚಿ ನರಳುವಂತೆ ಮಾಡಿದ ಕಾವಲುಗಾರ - ಮೈಯುರಿಯಿಂದ ನರಳಿದ


ಕಿನ್ನಿಗೋಳಿ: ಕೆಲದಿನಗಳ ಹಿಂದೆ ಕಿನ್ನಿಗೋಳಿಯಲ್ಲಿ ನಾಗರಹಾವೊಂದಕ್ಕೆ ಡಿಸೇಲ್ ಎರಚಿ ನರಳುವಂತೆ ಮಾಡಿದವನು ಇದೀಗ ಮೈಉರಿಯಿಂದ ನರಳಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರಹಾವೊಂದು ಕಂಡು ಬಂದಿತ್ತು. ಇದನ್ನು ಕಂಡ ಕಟ್ಟಡದ ಕಾವಲುಗಾರ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ಆ ನಾಗರಹಾವಿಗೆ ಡಿಸೇಲ್ ಎರಚಿದ್ದಾನೆ. ಇದರಿಂದ ವಿಪರೀತ ಮೈ ಉರಿಯಿಂದಾಗಿ ನಾಗರಹಾವು ಒದ್ದಾಡಿದೆ. ತಕ್ಷಣ ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ತಿಳಿಸಿದ್ದಾರೆ. ಯತೀಶ್ ಅವರು ಸ್ಥಳಕ್ಕೆ ಧಾವಿಸಿ ಶ್ಯಾಂಪ್ ಮೂಲಕ ಹಾವನ್ನು ತೊಳೆದು, ಆರೈಕೆ ಮಾಡಿದ್ದಾರೆ. ಈ ವೇಳೆ ನಾಗರಹಾವು ಸಹಜ ಸ್ಥಿತಿಗೆ ಬಂದಿದೆ. ಬಳಿಕ ಅವರು ಕಾಡಿಗೆ ಬಿಟ್ಟಿದ್ದಾರೆ.






ಆದರೆ ಇದೀಗ ಒಂದು ವಾರ ಕಳೆಯುವಷ್ಟರಲ್ಲೇ ಡಿಸೇಲ್ ಎರಚಿದ ಕಾವಲುಗಾರನಿಗೂ ನಾಗರಹಾವಿನಂತೆ ಮೈ ಉರಿಯಲು ಆರಂಭಿಸಿದೆ. ಆತನನ್ನು ಸಂಬಂಧಿಕರು ಉತ್ತರ ಕರ್ನಾಟಕಕ್ಕೆ ಕರೆದುಕೊಂಡು ಹೋಗಿದ್ದು, ಇದೀಗ ಅಲ್ಲೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ಉರಗ ರಕ್ಷಕ ಯತೀಶ್ ಕಟೀಲು ತಿಳಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article