ಚೈತ್ರಾ ಕುಂದಾಪುರ ಬಜರಂಗದಳ ಸಂಘಟನೆಯವಳು ಅಲ್ಲ, ಭಾಷಣಕ್ಕೆ ಮಾತ್ರ ಕರೆಸಿಕೊಳ್ಳುತ್ತಿದ್ದೆವು - ಶರಣ್ ಪಂಪ್ ವೆಲ್
Thursday, September 21, 2023
ಮಂಗಳೂರು: ಚೈತ್ರಾ ಕುಂದಾಪುರ ಉತ್ತಮ ವಾಗ್ಮಿಯೆಂದು ನಾವು ಆಕೆಯನ್ನು ಭಾಷಣಕ್ಕೆ ಕರೆಯುತ್ತಿದ್ದೆವು. ಆದರೆ ಬಜರಂಗದಳಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಮಂಗಳೂರಿನಲ್ಲಿ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಚೈತ್ರ ಕುಂದಾಪುರ ಬಜರಂಗದಳ ಸಂಘಟನೆಯವಳಲ್ಲ. ಅವ್ಯವಹಾರಗಳಿಗೆ ಬಜರಂಗದಳ ಸಂಘಟನೆ ಆಸ್ಪದ ಕೊಡುವುದಿಲ್ಲ. ಎರಡು ತಿಂಗಳ ಹಿಂದೆಯೇ ಗೋವಿಂದ ಬಾಬು ಪೂಜಾರಿಯರಿಗೆ ಹಣ ವಂಚನೆಯಾಗಿರುವ ಘಟನೆ ನನ್ನ ಗಮನಕ್ಕೆ ಬಂದಿತ್ತು. ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಗಳು ನನ್ನೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದರು. ನಿಮ್ಮ ಪಾತ್ರ ಇಲ್ಲವೆಂದ ಮೇಲೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸ್ವಾಮೀಜಿಯವರಿಗೆ ಹೇಳಿದ್ದೆ. ಎಂದು ಹೇಳಿದರು.
ಈ ರೀತಿ ಪ್ರಕರಣಗಳು ಎಲ್ಲಿ ಕೂಡ ಆಗಬಾರದು. ಯಾರು ತಪ್ಪಿತಸ್ಥರಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಶರಣ್ ಪಂಪ್ ವೆಲ್ ಹೇಳಿದರು.