-->
ಎರಡನೇ ವಿವಾಹವಾಗಲಿದ್ದಾರಾ ನಾಗಚೈತನ್ಯ...! ವಧು ಯಾರು ಗೊತ್ತೇ....?

ಎರಡನೇ ವಿವಾಹವಾಗಲಿದ್ದಾರಾ ನಾಗಚೈತನ್ಯ...! ವಧು ಯಾರು ಗೊತ್ತೇ....?


ಆಂಧ್ರಪ್ರದೇಶ: ಟಾಲಿವುಡ್ ತಾರೆಯರಾದ ನಾಗಚೈತನ್ಯ ಮತ್ತು ಸಮಂತಾ ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ‘ಏ ಮಾಯ ಚೇಸಾವೆ’ ಸಿನಿಮಾದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ಪ್ರೀತಿಯ ಬಲೆಯಲ್ಲಿದ್ದ ಇವರಿಬ್ಬರು 2017ರಲ್ಲಿ ಮದುವೆಯಾಗಿದ್ದರು. ಸುಗಮ ಜೀವನ ನಡೆಸುತ್ತಿದ್ದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟಿತು. ಕೊನೆಗೆ ಇಬ್ಬರೂ ಸುಮಾರು ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಎಲ್ಲರಿಗೂ ಗೊತ್ತಿರುವ ಹಾಗೆ 2021 ರಲ್ಲಿ ವಿಚ್ಛೇದನ ಪಡೆದ ಬಳಿಕ ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ನಾಗಚೈತನ್ಯ ಎರಡನೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ವರದಿಗಳ ಪ್ರಕಾರ, ನಾಗಾಚೈತನ್ಯರ ತಂದೆ ನಾಗಾರ್ಜುನ ಪುತ್ರನ ಎರಡನೇ ಮದುವೆಗೆ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರಂತೆ. ಅವರು ಈಗಾಗಲೇ ಹುಡುಗಿಯನ್ನೂ ನೋಡಿದ್ದು, ಆಕೆ ಉದ್ಯಮಿಯೊಬ್ಬರು ಪುತ್ರಿಯಂತೆ. ಹಾಗೆ ನೋಡಿದರೆ ಹುಡುಗಿಯ ಕುಟುಂಬಕ್ಕೂ ಚಿತ್ರರಂಗಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಮದುವೆಯ ಮಾತು ಮುಗಿದಿದೆ ಎಂಬುದು ಸುದ್ದಿಯ ಸಾರಾಂಶ. ಆದರೆ, ಈ ಬಗ್ಗೆ ಅಕ್ಕಿನೇನಿ ಕುಟುಂಬದವರು ಯಾರೂ ಪ್ರತಿಕ್ರಿಯೆ ನೀಡಿಲ್ಲ. ಇದರಲ್ಲಿ ಸತ್ಯಾಂಶ ಏನು ಎಂಬುದು ತಿಳಿಯಬೇಕಿದೆ.

ಸಮಂತಾ ವಿಚ್ಛೇದನದ ಬಳಿಕ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲಯವರನ್ನು ಪ್ರೀತಿಸುತ್ತಿದ್ದರು ಎಂಬ ಊಹಾಪೋಹ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳ ಜೊತೆಗೆ ಮಾಧ್ಯಮಗಳಲ್ಲಿ ಇವರ ಬಗ್ಗೆ ನಾನಾ ರೀತಿಯ ಸುದ್ದಿಗಳು ಕೇಳಿ ಬರುತ್ತಿವೆ. ಈ ಡೇಟಿಂಗ್ ಸುದ್ದಿಯನ್ನು ಶೋಭಿತಾ ನಿರಾಕರಿಸಿದ್ದಾರೆ. ‘ಸದ್ಯ ನನಗೆ ಒಳ್ಳೆಯ ಸಿನಿಮಾ ಅವಕಾಶಗಳು ಬರುತ್ತಿವೆ. ಜೀವನದಲ್ಲಿ ಎಷ್ಟೋ ಒಳ್ಳೆಯ ಅನುಭವಗಳನ್ನು ಬಿಟ್ಟು ಯಾರೋ ಹೇಳಿದರೆಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರ ಬಗ್ಗೆ ಚಿಂತಿಸಲು ನನಗೆ ಸಮಯವಿಲ್ಲ. ನನ್ನ ಬಗೆಗಿನ ವದಂತಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನೇನೂ ತಪ್ಪು ಮಾಡಿಲ್ಲ. ತಪ್ಪಾಗದಿದ್ದಾಗ ಸ್ಪಷ್ಟತೆ ನೀಡುವ ಅಗತ್ಯವಿಲ್ಲ. ನನ್ನ ಕೆಲಸವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ’ ಎಂದು ತಿಳಿಸಿದರು.

ಮೊನ್ನೆಯಷ್ಟೇ ಲಂಡನ್‌ನಲ್ಲಿರುವ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಫೋಟೋ ನೆಟ್‌ನಲ್ಲಿ ವೈರಲ್ ಆಗಿತ್ತು. ಈ ಫೋಟೋ ಬೆಳಕಿಗೆ ಬಂದ ಬಳಿಕ ಅವರ ಸಂಬಂಧದ ಬಗ್ಗೆ ಸಾಕಷ್ಟು ಪ್ರಚಾರವಾಗಿತ್ತು. ಈ ಹಿಂದೆ ಎರಡ್ಮೂರು ಬಾರಿ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ನೆಟ್‌ನಲ್ಲಿ ವೈರಲ್ ಆಗಿದ್ದವು.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article