ಪತ್ನಿಯ ಹತ್ಯೆಗೈದು ಹೂತಿಟ್ಟ ಪತಿ: ತಾಯಿಯ ಮೃತದೇಹದ ಗುರುತು ಪತ್ತೆ ಹಚ್ಚಿದ ಮಗು



ಮುಂಬೈ: ಪತ್ನಿಯನ್ನು ಕೊಲೆಗೈದು ಆಕೆಯ ಮೃತದೇಹವವನ್ನು ಹೂತ್ತಿಟ್ಟು, ನಾಪತ್ತೆ ಪ್ರಕರಣ ದಾಖಲಿಸಿ ನಾಟಕವಾಡಿದ ಪತಿರಾಯನನ್ನು ಆಲಿಭಾಗ್​ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕುಸುಬಾ ಸಾಗರ್​ ಪವಾರ್​ (24) ಮೃತಪಟ್ಟ ಮಹಿಳೆ. ಸಾಗರ್ ಪವಾರ್ ಪತ್ನಿಯನ್ನೇ ಕೊಲೆಗೈದ ಪತಿ. ಆಕೆಯ ಮೃತದೇಹ ಆಲಿಭಾಗ್​ ಜಿಲ್ಲೆಯ ಪಾಲಿ ತಾಲ್ಲೂಕಿನ ಉಂಬರವಾಡಿ ಅರಣ್ಯ ಪ್ರದೇಶದಲ್ಲಿ  ಪತ್ತೆಯಾಗಿದೆ. 

ಯುವತಿಯ ದೊರೆತಾಗ ಆರೋಪಿ ಪತಿ ಸಾಗರ್​ ಪವಾರ್​ ತನ್ನ ಪತ್ನಿಯನ್ನು ಗುರುತಿಸಲು ಹಿಂದೇಟು ಹಾಕಿದ್ದಾನೆ. ಬಳಿಕ ದಂಪತಿಯ ಆರು ವರ್ಷದ ಪುತ್ರ ತನ್ನ ತಾಯಿ ಧರಿಸಿದ್ದ ಬಟ್ಟೆಯಿಂದ ಮೃತದೇಹವನ್ನು ಗುರುತಿಸಿದ್ದಾನೆ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆಗೈದು ಮೃತದೇಹವನ್ನು ಪಾಲಿ ತಾಲ್ಲೂಕಿನಲ್ಲಿರುವ ಉಂಬರವಾಡಿಯ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.