-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನಾಲ್ಕನೇ ವಿವಾಹಕ್ಕೆ ಮೂರನೇ ಪತಿಯನ್ನೇ ಕೊಲೆಗೈದ ಪತ್ನಿ

ನಾಲ್ಕನೇ ವಿವಾಹಕ್ಕೆ ಮೂರನೇ ಪತಿಯನ್ನೇ ಕೊಲೆಗೈದ ಪತ್ನಿ

ಬಿಹಾರ: ದಂಪತಿ ನಡುವೆ ಜಗಳ ಸರ್ವೇಸಾಮಾನ್ಯ. ಆದರೆ ಕೆಲವೊಮ್ಮೆ ಈ ಜಗಳ ವಿಕೋಪಕ್ಕೆ ಹೋಗಿ ದಂಪತಿ ನಡುವೆ ಹೊಡೆದಾಟಗಳು ನಡೆದು ಕೊಲೆಯೋ, ಆತ್ಮಹತ್ಯೆಗಳಿಗೋ ಕಾರಣವಾಗುತ್ತದೆ. ಇದೀಗ ನಾಲ್ಕನೇ ಮದುವೆಯಾಗಲು ಹೊರಟ ಯುವತಿ ತನ್ನ ಮೂರನೇ ಪತಿಯನ್ನು ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಅಸ್ಮೇರಿ ಖಾತೂನ್ ಉರಾಫ್ ಈ ಹಿಂದೆಯೇ ಎರಡು ಮದುವೆಯಾಗಿದ್ದಳು. ಆದರೆ ಎರಡೂ ಪತಿಯರನ್ನು ತೊರೆದ ಅವರು, ಎರಡು ವರ್ಷಗಳ ಹಿಂದೆ ಸುಭಾಷ್​​ನನ್ನು ಮದುವೆಯಾಗಿದ್ದಳು. ಆದರೆ ಇತ್ತೀಚೆಗೆ ಸುಭಾಷ್ ತನ್ನ ಪತ್ನಿಯಲ್ಲಿ ಬದಲಾವಣೆಯನ್ನು ಗಮನಿಸಿದ್ದಾನೆ. ಅವನಿಗೆ ಅವಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಸು ಬಂದಿತ್ತು. ಆದ್ದರಿಂದ ಸುಭಾಷ್ ಆಕೆಯಲ್ಲಿ ಜಗಳವಾಡಲು ಆರಂಭಿಸಿದ್ದಾನೆ. ಆದ್ದರಿಂದ ಪತ್ನಿ ಮತ್ತು ಅತ್ತೆ ಕತ್ತು ಹಿಸುಕಿ ಆತನನ್ನು ಕೊಲೆ ಮಾಡಿದ್ದಾರೆ.

ಮೃತನ ಸಹೋದರ ನೀಡಿದ ವಿವರಗಳ ಪ್ರಕಾರ, ಸುಭಾಷ್ ಪತ್ನಿ ಅಸ್ಮೇರಿ ಖಾತೂನ್ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಮೃತ ಸುಭಾಷ್ ಮದ್ಯವ್ಯಸನಿಯಾಗಿದ್ದ. ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಹಿಂದೆಯೇ ಅಸ್ಮೇರಿ ಎರಡು ಬಾರಿ ವಿವಾಹವಾದ ನಂತರ ಅವರನ್ನು ಬಿಟ್ಟು ಸುಭಾಷ್ ನನ್ನು ಮೂರನೇ ಮದುವೆಯಾಗಿದ್ದಳು ಎನ್ನಲಾಗಿದೆ. ಇದಲ್ಲದೆ, ಅಸ್ಮೆರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತದೆ.

ತನ್ನ ಸಹೋದರನ ಪತ್ನಿ ಬೇರೆ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ. ಆದರೆ ಈ ವಿಷಯ ತನ್ನ ಸಹೋದರ ಸುಭಾಷ್​​ಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಅಸ್ಮೇರಿ ತನ್ನ ಪೋಷಕರೊಂದಿಗೆ ಸೇರಿ ಸುಭಾಷ್​ನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಘಟನೆಯ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಬಂದಿರುವುದಾಗಿ ಫುಲ್ವಾರಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Ads on article

Advertise in articles 1

advertising articles 2

Advertise under the article

ಸುರ