C T ರವಿಗೆ ಮಾತನಾಡುವ ಚಟ- ಸಚಿವ ದಿನೇಶ್ ಗುಂಡೂರಾವ್ - VIDEO
Wednesday, September 20, 2023
ಮಂಗಳೂರು: ಮಾಜಿ ಸಚಿವ ಸಿ ಟಿ ರವಿ ಗೆ ಮಾತನಾಡುವ ಚಟವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ
ಮಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಮೂವರು ಡಿಸಿಎಂಗಳ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಬಿಜೆಪಿಯ ಸಿ ಟಿ ರವಿ ಮಾತಾಡಿದ್ದಾರೆ. ಡಿಸಿಎಂ ವಿಚಾರವು
ದೊಡ್ಡ ವಿಷಯವಲ್ಲ. ಹಿಂದೆ ಕೂಡ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿಚಾರದಲ್ಲಿ ಮಾತಾಡಿ ಮಾತಾಡಿ ಅವರು ಸೋತು ಹೋಗಿದ್ದಾರೆ. ಇದು ದೊಡ್ಡ ವಿಚಾರವಲ್ಲ ಎಂದರು
ಈ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಒಡಕುಂಟಾಗಿಲ್ಲ.ಕೆಲವರ ಅಭಿಪ್ರಾಯ ಬೇರೆ ಇರಬಹುದು. ಸರಿಯಾದ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ಸಿ ಟಿ ರವಿ ಯವರು ಪ್ರತಿಯೊಂದು ವಿಚಾರದಲ್ಲಿ ಅನಾವಶ್ಯಕ ವಾಗಿ ಯಾಕೆ ಮಾತಾಡುತ್ತಾರೋ ಗೊತ್ತಿಲ್ಲ. ಅವರ ಕ್ಷೇತ್ರದಲ್ಲಿ ಸೋತರು, ದೆಹಲಿಯಿಂದ ಅವರನ್ನು ವಾಪಾಸು ಕಳುಹಿಸಿದ್ದಾರೆ. ಪ್ರತಿಯೊಂದರ ಬಗ್ಗೆಯೂ ಮಾತಾಡುವುದು ಅವರಿಗೆ ಚಟವಾಗಿದೆ ಎಂದರು.