ಕನ್ಯಾ ರಾಶಿಯಲ್ಲಿ ಮಂಗಳ ಅಸ್ತ: ಈ 5 ರಾಶಿಯವರಿಗೆ ಅತಿ ಕಷ್ಟಕರದ ದಿನಗಳು ಆರಂಭ..!!
Monday, September 25, 2023
ಮೇಷ ರಾಶಿ:
ಕನ್ಯಾ ರಾಶಿಯಲ್ಲಿ ಮಂಗಳ ಅಸ್ತದ ಋಣಾತ್ಮಕ ಪರಿಣಾಮದಿಂದಾಗಿ ಮೇಷ ರಾಶಿಯವರಿಗೆ ಉದ್ವೇಗ ಹೆಚ್ಚಾಗಲಿದೆ. ಇದು ನಿಮ್ಮ ಕೆಲಸ ಕಾರ್ಯಗಳಲ್ಲೂ ಸಮಸ್ಯೆಯನ್ನು ಹೆಚ್ಚಿಸಲಿದೆ. ಮಾತ್ರವಲ್ಲ, ಹಣಕಾಸಿನ ನಷ್ಟ ಸಾಧ್ಯತೆ ಇದೆ.
ವೃಷಭ ರಾಶಿ:
ಈ ಸಮಯದಲ್ಲಿ ಮಂಗಳನು ನಿಮ್ಮ ಉದ್ಯೋಗ ರಂಗದಲ್ಲಿ ಕೆಲಸದ ಹೊರೆ ಮತ್ತು ಜವಾಬ್ದಾರಿಗಳಿಂದ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇರುವುದರಿಂದ ನೀವು ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ.
ಕರ್ಕಾಟಕ ರಾಶಿ:
ಮಂಗಳ ಅಸ್ತದ ಪರಿಣಾಮವಾಗಿ ಕರ್ಕಾಟಕ ರಾಶಿಯವರ ಜೀವನಶೈಲಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ, ಅನಗತ್ಯ ಕೋಪ ಮತ್ತು ವಿವಾದಗಳಿಂದ ದೂರವಿರುವುದು ಒಳಿತು. ಇದಲ್ಲದೆ, ಮಾನಸಿಕ ಅಸಮಾಧಾನಗಳು ನಿಮ್ಮನ್ನು ಹೆಚ್ಚು ಕಾಡುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ.
ಸಿಂಹ ರಾಶಿ:
ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ. ಕೆಲಸದಲ್ಲಿ ಅಡೆತಡೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಯಾವುದೇ ಕೆಲಸದಲ್ಲಿ ಜಾಗರೂಕರಾಗಿರಿ. ಇಲ್ಲದಿದ್ದರೆ, ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಇದು ಹೆಚ್ಚು ಪ್ರಭಾವ ಬೀರಲಿದ್ದು ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಕಠಿಣವಾಗಬಹುದು.
ಧನು ರಾಶಿ:
ಅಸ್ತಮಿಸಿರುವ ಮಂಗಳನು ಧನು ರಾಶಿಯವರ ವೃತ್ತಿ ರಂಗದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಯೋಜನೆಗಳು ವಿಫಲವಾಗುವುದರಿಂದ ಮನಸ್ಸಿನ ಒತ್ತಡ ಹೆಚ್ಚಾಗಬಹುದು..