ಸೂರ್ಯ ಸಂಚಾರದ ಪ್ರಭಾವದಿಂದ ವರ್ಷಗಳ ಬಳಿಕ ಒಲಿದು ಬರುತ್ತಿದೆ ಈ 4 ರಾಶಿಯವರಿಗೆ ಅದೃಷ್ಟ..!
Tuesday, September 12, 2023
ಮೇಷ ರಾಶಿ :
ಮೇಷ ರಾಶಿಯವರು ಸೂರ್ಯನ ಸಂಚಾರದಿಂದ ಪ್ರಯೋಜನ ಪಡೆಯುತ್ತಾರೆ. ಸೂರ್ಯನ ಕಿರಣದಂತೆ ಮೇಷ ರಾಶಿಯವರ ಅದೃಷ್ಟವು ಪ್ರಕಾಶಮಾನವಾಗಿ ಹೊಳೆಯುತ್ತದೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ.
ವೃಷಭ ರಾಶಿ :
ಭಗವಾನ್ ಸೂರ್ಯನಿಂದ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ಹಣದ ಹರಿವಿನಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ. ಕೆಲಸದಲ್ಲಿ ಉನ್ನತಿ ಮತ್ತು ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ.
ವೃಶ್ಚಿಕ ರಾಶಿ :
ಸೂರ್ಯ ಸಂಕ್ರಮಣ ವೃಶ್ಚಿಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಜೀವನದಲ್ಲಿ ಉದ್ಭವಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದು. ಪ್ರೇಮ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆದರೆ ನಿಮ್ಮ ಸಂಗಾತಿಯೊಂದಿಗೆ ಮನ ಬಿಚ್ಚಿ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ಧನು ರಾಶಿ :
ಸೂರ್ಯನ ಸಂಚಾರವು ಧನು ರಾಶಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಉದ್ಯೋಗದಲ್ಲಿರುವವರಿಗೆ ಈ ಅವಧಿಯು ಹೆಚ್ಚು ಅನುಕೂಲಕರವಾಗಿರುತ್ತದೆ. ವ್ಯಾಪಾರದಲ್ಲಿ ಧನಲಾಭವೂ ಇರುತ್ತದೆ. ದೈಹಿಕ ಆರೋಗ್ಯಕ್ಕೆ ಹೆಚ್ಚು ಗಮನ ಬೇಕು. ಕುಟುಂಬ ಸಮೇತ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ.