ಮಂಗಳೂರು: ಬಲೆಗೆ ಬಿತ್ತು 300 ಕೆಜಿ ತೂಕದ ಮುರು ಮೀನು - ವೀಡಿಯೋ ವೈರಲ್


ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮುರು ಮೀನು ಬಿದ್ದಿದೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.





ನಗರದ ಮೀನುಗಾರಿಕಾ ದಕ್ಕೆಯಿಂದ ಆಳಸಮುದ್ರ ಮೀನುಗಾರಿಕಾ ಬೋಟ್ ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 300 ಕೆಜಿಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಿ ಲೋಡ್ ಮಾಡಲು ಹರಸಾಹಸ ಪಡುವುದು ವೀಡಿಯೋದಲ್ಲಿ ಸೆರೆಯಾಗಿದೆ. ಸಾಮಾನ್ಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ‌. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣಲು ಸಿಗುವುದು ವಿರಳ. ಕೆಜಿಗೆ 200 ರೂ. ಬೆಲೆಗೆ ಈ ಮೀನು ಮಾರಾಟವಾಗುತ್ತದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.