ಸಮಂತಾ - ವಿಜಯ್ ದೇವರಕೊಂಡ ಹಾಟ್ ಡ್ಯಾನ್ಸ್ ವೀಡಿಯೋ ಸಖತ್ ವೈರಲ್: ಸಿಕ್ಕಾಪಟ್ಟೆ ಟ್ರೋಲ್

ಹೈದರಾಬಾದ್: ನಟಿ ಸಮಂತಾ ಮತ್ತು ನಟ ವಿಜಯ್​ ದೇವರಕೊಂಡ ಅಭಿನಯದ 'ಖುಷಿ' ಸಿನಿಮಾ ಲವ್​, ರೊಮ್ಯಾಂಟಿಕ್​ ಎಂಟರ್ಟೈನ್ ಮೆಂಟ್ ರ್ಚಿತ್ರವಾಗಿದೆ. ಶಿವ ನಿರ್ವಾಣ ಎಂಬುವರು ಈ ಸಿನಿಮಾ ನಿರ್ದೇಶನ​ ಮಾಡಿದ್ದಾರೆ. ಇದರ ಕೆಲವು ಹಾಡುಗಳು ಮತ್ತು ಟ್ರೈಲರ್​ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನು ಗಮನ ಸೆಳೆದಿದೆ. ಮಲಯಾಳಂ ಸಂಗೀತ ನಿರ್ದೇಶಕ ಹೇಶಮ್​ ಅಬ್ದುಲ್​ ವಾಹಬ್​ ಮ್ಯೂಸಿಕ್​ ನೀಡಿದ್ದಾರೆ. ಸೆಪ್ಟೆಂಬರ್​ 1ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.


ಖುಷಿ ಸಿನಿಮಾ ತಂಡ ಇತ್ತೀಚೆಗಷ್ಟೇ ಪ್ರಚಾರ ಕಾರ್ಯ ಶುರು ಮಾಡಿದೆ. ಆಗಸ್ಟ್​ 15ರಂದು ಚಿತ್ರತಂಡ ಹೈದರಾಬಾದ್​ನ ಎಚ್​ಐಸಿಸಿ ಹಾಲ್​ನಲ್ಲಿ ಸಂಜೆ 6 ಗಂಟೆಗೆ ವಿಶೇಷವಾಗಿ ಸಂಗೀತ ಸಂಜೆ ಆಯೋಜಿಸಿತ್ತು. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಾಹಿಬ್, ಸಿದ್ ಶ್ರೀರಾಮ್, ಜಾವೇದ್ ಅಲಿ, ಅನುರಾಗ್ ಕುಲಕರ್ಣಿ, ಹರಿಚರಂ ಮತ್ತು ಚಿನ್ಮಯಿ ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಸಮಂತಾ ಮತ್ತು ವಿಜಯ್​ ದೇವರಕೊಂದು ವೇದಿಕೆ ಮೇಲೆ ಡಾನ್ಸ್​ ಮಾಡಿದರು. ಬಹಳಷ್ಟು ನಾಯಕ - ನಾಯಕಿಯರು​ ಅನೇಕ ವೇದಿಕೆಗಳಲ್ಲಿ ಡಾನ್ಸ್​ ಮಾಡಿದ್ದಾರೆ. ಆದರೆ, ಸಮಂತಾ-ವಿಜಯ್​ ಡಾನ್ಸ್​ಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿವೆ. 


ಡಾನ್ಸ್​ ವೇಳೆ ವಿಜಯ್​ ತಮ್ಮ ಶರ್ಟ್​ ಅನ್ನು ತೆಗೆದು ಕೇವಲ ಬನಿಯನ್​ನಲ್ಲಿ ಸಮಂತಾರನ್ನು ಎತ್ತಿಕೊಂಡು ಗರಗರನೇ ತಿರುಗಿಸಿ ವಿನೂತನವಾಗಿ ಹೆಜ್ಜೆ ಹಾಕಿದ್ದಾರೆ. ನಾಯಕಿಗಿಂತ ಭಿನ್ನವಾಗಿ ಹೀರೋಗೆ ಡಾನ್ಸ್ ಮಾಡುವ ಡಾನ್ಸರ್​ ರೀತಿ ಕಾಣುವಂತೆ ಡ್ರೆಸ್​ ಮಾಡಲಾಗಿದೆ ಎಂದು ನೆಟಿಗ್ಗರು ವಿಜಯ್​ ದೇವರಕೊಂಡ ಅವರ ಡ್ರೆಸ್ಸಿಂಗ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಸಮಂತಾ ಅಭಿಮಾನಿಗಳು ಕೂಡ ಸಮಂತಾ ಹೀಗೆ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ವಿರುದ್ಧವೂ ಮೀಮ್ಸ್, ಟ್ರೋಲ್‌ಗಳು ಹರಿದಾಡುತ್ತಿವೆ. ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ಬದಲಾಗಿದ್ದಾರೆ, ಮೊದಲಿನ ಹಾಗೆ ಆತುರದ ಸ್ವಭಾವವಿಲ್ಲ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಖುಷಿ ಸಿನಿಮಾ ಸಂಗೀತ ಸಂಜೆಯ ವಿಡಿಯೋ ನೋಡಿದ ಅಭಿಮಾನಿಗಳು ವಿಜಯ್ ಏನೂ ಬದಲಾಗಿಲ್ಲ. ಸ್ವಲ್ಪ ಗ್ಯಾಪ್ ಕೊಟ್ಟಿದ್ದರು ಅಷ್ಟೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.