ತಲಪಾಡಿ- SSLC ವಿದ್ಯಾರ್ಥಿನಿಗೆ ಕಿರುಕುಳ- ಮುವಾದ್ ಅರೆಸ್ಟ್!

ಅಪ್ರಾಪ್ತ ಬಾಲಕಿ ( SSLC ವಿದ್ಯಾರ್ಥಿನಿ) ಮೇಲೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟಾಂಡ್ ಬಳಿ ನಡೆದಿದೆ.  ಆರೋಪಿ ಮುಡಿಪು ದರ್ಖಾಸು ನಿವಾಸಿ ಮುವಾದ್ (35)ನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸ್‌ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಈಗಾಗಲೇ ಗಾಂಜಾ ಸಹಿತ ಇತರ ಎರಡು ಪ್ರಕರಣಗಳಿದ್ದು, ನ್ಯಾಯಾ ಲಯದಲ್ಲಿ ವಿಚಾರಣಾ ಹಂತ ದಲ್ಲಿದೆ.

ಸೋಮವಾರ ಸಂಜೆ  ವಿದ್ಯಾರ್ಥಿನಿ ಶಾಲೆ ಯಿಂದ ಬಸ್‌ನಲ್ಲಿ ಬಂದು ಸಹೋದರಿ ಗಾಗಿ ಬಸ್‌ ತಂಗು ದಾಣದಲ್ಲಿ ಕಾಯುತ್ತಾ ನಿಂತಿದ್ದಳು. ಇದೇ ವೇಳೆ ಅದೇ ನಿಲ್ದಾಣದಲ್ಲಿ ನಿಂತಿದ್ದ ಮುವಾದ್ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿ, ಮನೆಗೆ ಬಿಡು ವುದಾಗಿ ಹೇಳಿ ಕೈಹಿಡಿದು ಎಳೆದಿದ್ದಾನೆ.

 ವಿದ್ಯಾರ್ಥಿನಿ ಬೊಬ್ಬಿಡಲು ಆರಂಭಿಸಿ ದಾಗ ಸ್ಥಳೀಯ ರಿಕ್ಷಾ ಚಾಲಕರು ಮುವಾದ್‌ನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲ ಪೊಲೀಸರು ಆರೋಪಿ ಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.