-->

ತೋಟಗಾರಿಕಾ ನಿರ್ದೇಶಕ ಸಿರಿಲ್ ರಾಬರ್ಟ್ ಡಿಸೋಜಾರಿಗೆ ಬೀಳ್ಕೊಡುಗೆ

ತೋಟಗಾರಿಕಾ ನಿರ್ದೇಶಕ ಸಿರಿಲ್ ರಾಬರ್ಟ್ ಡಿಸೋಜಾರಿಗೆ ಬೀಳ್ಕೊಡುಗೆ

ತೋಟಗಾರಿಕಾ ನಿರ್ದೇಶಕ ಸಿರಿಲ್ ರಾಬರ್ಟ್ ಡಿಸೋಜಾರಿಗೆ ಬೀಳ್ಕೊಡುಗೆ





ರಾಜ್ಯದ ವೇತನದಾರರ ಸಹಕಾರಿ ಬ್ಯಾಂಕುಗಳ ಪೈಕಿ ಅಗ್ರಸ್ಥಾನ ಪಡೆದಿರುವ ದಿ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್ ಕೋಆಪರೇಟಿವ್ ಬ್ಯಾಂಕ್, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಮಂಗಳೂರು ಇಲ್ಲಿ ನಿರ್ದೇಶಕರಾಗಿದ್ದ ಶ್ರೀ ಸಿರಿಲ್ ರಾಬರ್ಟ್ ಡಿಸೋಜಾ ಅವರು 40 ವರ್ಷಗಳ ಕಾಲ ತೋಟಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ದಿನಾಂಕ 31.7.2023 ರಂದು ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಬ್ಯಾಂಕಿನ ನಿರ್ದೇಶಕರುಗಳ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವು ಮಂಗಳೂರಿನ ಬಿಜೈ ಚರ್ಚ್ ಹಾಲಿನಲ್ಲಿ ದಿನಾಂಕ 5.8.2023ರಂದು ಜರುಗಿತು.


ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ವಿಧಾನಸಭೆಯ ಗೌರವಾನ್ವಿತ ಸಭಾಪತಿ ಶ್ರೀ ಯು.ಟಿ. ಖಾದರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಸಮಾರಂಭದಲ್ಲಿ ಉಪಸ್ಥಿತರಿದ್ದ ದೇಶದ ನಾಲ್ಕನೆಯ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಗೆ ಭಾಜನರಾದ ಅಕ್ಷರ ಸಂತ ಶ್ರೀ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಬಿಜೈ ಚರ್ಚಿನ ಧರ್ಮ ಗುರುಗಳು ಹಾಗೂ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಪಿ.ಆರ್.ಒ. ಆಗಿರುವ ವಂದನೀಯ ಫಾದರ್ ಡಾ. ಜೆ. ಬಿ.ಸಾಲ್ದಾನ ಪೆರ್ಮನ್ನೂರು ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾದರ್ ಸಿಪ್ರಿಯಾನ್ ಪಿಂಟೋ ಇವರು ಸಮಾರಂಭಕ್ಕೆ ಆಗಮಿಸಿ ಆಶೀರ್ವಚನಗೈದರು.



ಕಚ್ಚೂರು ಶ್ರೀ ಮಾಲ್ತಿ ದೇವಿ ದೈವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲ ಕೇಂದ್ರ ಬಾರ್ಕೂರು ಇಲ್ಲಿನ ಆಡಳಿತ ಮೊಕ್ತೇಸರ ಶ್ರೀ ಶಿವಪ್ಪ ನಂತೂರು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ. ರೋನಾಲ್ಡ್ ಅನಿಲ್ ಫೆರ್ನಾಂಡಿಸ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪ್ರದೀಪ್ ಡಿಸೋಜಾ, ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀ ಸತೀಶ್ ಕುಮಾರ್ ಕುದ್ರೋಳಿ, ಸೌತ್ ಕೆನರಾ ಗೌರ್ಮೆಂಟ್ ಆಫೀಸರ್ಸ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿದ್ದರು.



ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಶ್ರೀಮತಿ ತಿಲೋತ್ತಮ, ನಿರ್ದೇಶಕರುಗಳಾದ ಶ್ರೀಮತಿ ಸುಜಾತ, ಶ್ರೀಮತಿ ಶಶಿಕಲಾ, ಶ್ರೀ ಶಮಂತ್ ಕುಮಾರ್, ಶ್ರೀ ಪದ್ಮನಾಭ ಜೋಗಿ, ಶ್ರೀ ಶಿವಾನಂದ ಎಂ., ಶ್ರೀ ಅಕ್ಷಯ್ ಭಂಡಾರ್ಕರ್, ಶ್ರೀ ಹೇಮಚಂದ್ರ, ರವರು ಉಪಸ್ಥಿತರಿದ್ದರು.



ಸಭಾ ಕಾರ್ಯಕ್ರಮದ ಬಳಿಕ ಸುಗಮ ಸಂಗೀತ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬ್ಯಾಂಕಿನ ನಿರ್ದೇಶಕರಾಗಿರುವ ಶ್ರೀ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ವಂದಿಸಿದರು. ಡಾ. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.



Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article