ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾಗೆ ಸಿಕ್ತು ಸಿನಿಮಾ ಆಫರ್!


ಹೊಸದಿಲ್ಲಿ: 'ಪಬ್‌ಜಿ' ಮೂಲಕ ಸಿಕ್ಕ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಮಕ್ಕಳ ಸಮೇತವಾಗಿ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ಗೆ ಸಿನಿಮಾದಲ್ಲಿ ನಟಿಸುವ ಭರ್ಜರಿ ಆಫ‌ ಸಿಕ್ಕಿದೆ. 

ಬಾಲಿವುಡ್ ನಿರ್ದೇಶಕರೊಬ್ಬರು ಸೀಮಾಗೆ ಸಿನಿಮಾದಲ್ಲಿ ಅವಕಾಶ ನೀಡಲು ಮುಂದಾಗಿದ್ದಾರೆ. ಅಲ್ಲದೇ, ಸೀಮಾ ಪತಿಗೆ ಬೆಂಬಲವಾಗಿ ಗುಜರಾತ್‌ನ ಕಂಪನಿಯೊಂದು ಕೆಲಸದ ಆಫರ್ ಕೊಟ್ಟಿದೆ. ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿಕೊಂಡ ಸೀಮಾಳ ವಿಡಿಯೊವೊಂದು ಇತ್ತೀಚೆಗೆ ವೈರಲ್ ಆಗಿತ್ತು. 


ಸೀಮಾ ಪ್ರಿಯಕರ ಸಚಿನ್‌ ಅವರ ಮನೆ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ನಲ್ಲಿ ಪತ್ರವೊಂದನ್ನು ಕಳುಹಿಸಲಾಗಿದೆ. ಸೀಮಾ ಹಾಗೂ ಸಚಿನ್  ಅವರಿಗೆ ವಾರ್ಷಿಕ 6 ಲಕ್ಷ ರೂ. ಪ್ಯಾಕೇಜ್‌ನ ಉದ್ಯೋಗ ನೀಡುವ ಭರವಸೆಯನ್ನು ಆ ಪತ್ರದಲ್ಲಿ ತಿಳಿಸಲಾಗಿದೆ.