-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅಡ್ಯನಡ್ಕದ ವಾರಣಾಶಿ ಅರ್ಗಾನಿಕ್ ಫಾರ್ಮ್‌ನಲ್ಲಿ ಸಹ್ಯಾದ್ರಿ ವಿದ್ಯಾರ್ಥಿಗಳ ಕಲರವ

ಅಡ್ಯನಡ್ಕದ ವಾರಣಾಶಿ ಅರ್ಗಾನಿಕ್ ಫಾರ್ಮ್‌ನಲ್ಲಿ ಸಹ್ಯಾದ್ರಿ ವಿದ್ಯಾರ್ಥಿಗಳ ಕಲರವ

ಅಡ್ಯನಡ್ಕದ ವಾರಣಾಶಿ ಅರ್ಗಾನಿಕ್ ಫಾರ್ಮ್‌ನಲ್ಲಿ ಸಹ್ಯಾದ್ರಿ ವಿದ್ಯಾರ್ಥಿಗಳ ಕಲರವ





ಮಂಗಳೂರಿನ ಸಹ್ಯಾದ್ರಿ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಕೃಷಿ ಚಟುವಟಿಕೆಯ ಸೊಗಡನ್ನು ಅನುಭವಿಸುವ ಪ್ರಯತ್ನ ನಡೆಸಿದರು.


ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಇರುವ ವಾರಣಾಜಿ ಆರ್ಗಾನಿಕ್ ಫಾರ್ಮ್‌ಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಕೃಷಿಯ ವೈವಿಧ್ಯಮಯ ಆಯಾಮಗಳ ಪರಿಚಯ ಮಾಡಿಕೊಂಡರು.

ವಿನೂತನ ಕೃಷಿ ಪದ್ಧತಿಗಳು, ವಿವಿಧ ಗಿಡಗಳನ್ನು ನೆಡುವ ಮೂಲಕ ಬಹುಮಹಡಿ ಪದ್ಧತಿಯಲ್ಲಿ ಅಡಿಕೆ, ತೆಂಗು, ಕೋಕೋ, ಬಾಳೆ, ಕರಿಮೆಣಸು, ಹಲಸು ಸೇರಿದಂತೆ ಕೃಷಿ ಬೆಳೆಗಳನ್ನು ಅನ್ವೇಷಿಸಲು ಈ ಕೃಷಿ ಪದ್ಧತಿ ಸಹಾಯಕವಾಯಿತು.


ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿ ಮಾಹಿತಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಸಹೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಕೃಷಿ ಮತ್ತು ಯುವಜನರು- ಅನುಭವಿ ಕೃಷಿ ಎಂಬ ಉದ್ಘೋಷದೊಂದಿಗೆ ಈ ಕಾರ್ಯಾಗಾರ ನಡೆಯಿತು.


ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಟ್ರಸ್ಟಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಆಧುನಿಕ ಕೃಷಿ ಪದ್ಧತಿ ಮತ್ತು ಕಸಿ ಹಾಗೂ ನಾಟಿ ಪ್ರಕ್ರಿಯೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳೂ ಪ್ರಾತ್ಯಕ್ಷಿಕೆಯಲ್ಲಿ ತೊಡಗಿಕೊಂಡರು.


ವಾರಣಾಶಿ ಈಜು ಅಕಾಡೆಮಿ ಮತ್ತು ವಾರಣಾಶಿ ಸಾವಯವ ಫಾರ್ಮ್‌ಗಳ ನಿರ್ದೇಶಕ ಪಾರ್ಥ ವಾರಣಾಶಿ ಅವರು ಪುನರುತ್ಪಾದಕರ ಕೃಷಿ- ಭೂತ, ವರ್ತಮಾನ ಮತ್ತು ಭವಿಷ್ಯ ಎಂಬ ವಿಷಯದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.


ಸಹ್ಯಾದ್ರಿ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರಾದ ಡಾ.ರಾಜೇಶ ಎಸ್, ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗದ ಎಚ್ಒಡಿ ಡಾ.ಮುಸ್ತಫಾ ಬಸ್ತಿಕೋಡಿ ಮಾರ್ಗದರ್ಶನ ನೀಡಿದರು ಮತ್ತು ಪ್ರೊ. ಗಣರಾಜ್ ಕೆ, ಪ್ರೊ. ಶ್ವೇತಾ ಎಸ್. ಶೆಟ್ಟಿ, ಪ್ರೊ. ಸುಚೇತಾ ಜಿ ಮತ್ತು ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಪ್ರತೀಕ್ ಎಚ್ ಕಾರ್ಯಕ್ರಮದ ಸಂಯೋಜಕರಾಗಿದ್ದರು.

Ads on article

Advertise in articles 1

advertising articles 2

Advertise under the article

ಸುರ