-->
1000938341
ಪಲಾವ್‌ಗೆ ವಿಷ ಬೆರೆಸಿ ತಂದೆ, ತಾಯಿ ಕೊಲೆ

ಪಲಾವ್‌ಗೆ ವಿಷ ಬೆರೆಸಿ ತಂದೆ, ತಾಯಿ ಕೊಲೆ


ಕೊಣನೂರು: ಅರಕಲಗೂಡು ತಾಲೂಕು ಕೊಣನೂರು ಹೋಬಳಿಯ ಬಿಸಿಲಹಳ್ಳಿಯಲ್ಲಿ ವಿಷಾಹಾರ ಸೇವಿಸಿ ದಂಪತಿ ಸಾವನ್ನಪ್ಪಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. 

ಮೃತ ದಂಪತಿಯ ಪುತ್ರನೇ ಬೆಳಗ್ಗಿನ ಉಪಾಹಾರ ಪಲಾವ್‌ಗೆ ವಿಷ ಬೆರೆಸಿ ತನ್ನ ತಂದೆ, ತಾಯಿಯನ್ನು ಕೊಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಗ್ರಾಮದ ನಂಜುಂಡಪ್ಪ (55), ಉಮಾ (48) ವಿಷಾಹಾರ ಸೇವಿಸಿ ಮೃತಪಟ್ಟ ದಂಪತಿ. ಇವರ ಮಗ ಮಂಜುನಾಥ್‌ ಕೊಲೆ ಆರೋಪಿ. 

ಆ.15ರಂದು ಮನೆಯಲ್ಲಿ ಬೆಳಗಿನ ತಿಂಡಿಗೆ ತಾಯಿ ಉಮಾ ಅವರು ಮಾಡಿಟ್ಟಿದ್ದ ಪಲಾವ್‌ಗೆ ಆರೋಪಿ ಮಗ ಮಂಜುನಾಥ್‌ ಕಳೆನಾಶಕ ಬೆರೆಸಿದ್ದ. ಅದನ್ನು ಸೇವಿಸಿದ್ದ ದಂಪತಿ  ಅಸ್ವಸ್ಥಗೊಂಡಿದ್ದರು. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬರುವ ವೇಳೆ  ಆ.23ರಂದು ಇಬ್ಬರೂ ದಿಢೀರ್ ಸಾವಿಗೀಡಾಗಿದ್ದರು.

Ads on article

Advertise in articles 1

advertising articles 2

Advertise under the article