-->
1000938341
ಪ್ರಿಯಕರನ ವಿರುದ್ದ ಸುಳ್ಳು ಹೇಳದ್ದಕ್ಕೆ  ಮಗಳನ್ನೆ  ಕೊಂದರು!

ಪ್ರಿಯಕರನ ವಿರುದ್ದ ಸುಳ್ಳು ಹೇಳದ್ದಕ್ಕೆ ಮಗಳನ್ನೆ ಕೊಂದರು!


 

ಲಖನೌ: ಪ್ರೀತಿಸಿ ಮದುವೆಯಾದ ಪ್ರಿಯಕರನ ವಿರುದ್ಧ ಸುಳ್ಳು ಸಾಕ್ಷ ಹೇಳಲು ನಿರಾಕರಿಸಿದ 8 ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ಕತ್ತು ಹಿಸುಕಿ ಪೋಷಕರೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ ಶಹಪುರದಲ್ಲಿ ನಡೆದಿದೆ. ಸಾವಿಗೀಡಾದ ಯುವತಿಯು ಪ್ರೀತಿಸುತ್ತಿದ್ದ ಯುವಕ ರಾಹುಲ್ ಜತೆಗೆ 2022ರ ಅಕ್ಟೋಬರ್‌ನಲ್ಲಿ ಓಡಿ ಹೋಗಿ, ವಿವಾಹವಾಗಿದ್ದಳು. ಡಿಸೆಂಬರ್‌ನಲ್ಲಿ ಮಗಳನ್ನು ಪತ್ತೆ ಮಾಡಿದ ಪೋಷಕರು ಪ್ರೇಮಿಗಳನ್ನು ಬೇರ್ಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಯುವಕ ರಾಹುಲ್ ಮೇಲೆ ಕಿಡ್ನ್ಯಾಪ್ ಕೇಸ್‌ ದಾಖಲಿಸಿ ಜೈಲಿಗೆ ಕಳಿಸಿದ್ದರು.

ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಯುವತಿಯ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದರು. ಪ್ರಿಯಕರ  ನನ್ನನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾನೆ'' ಎಂದು ಸುಳ್ಳು ಸಾಕ್ಷ್ಯ ಹೇಳುವಂತೆ ಪೋಷಕರು ಮಗಳ ಮೇಲೆ ಒತ್ತಡ ಹಾಕಿದ್ದರು ಎಂಬ ಸಂಗತಿ ತನಿಖೆ ವೇಳೆ ಬಯಲಿಗೆ ಬಂದಿದೆ.

''ಪ್ರೀತಿಸಿದ ಯುವಕ ರಾಹುಲ್ ಮೇಲೆ ಕೋರ್ಟ್‌ನಲ್ಲಿ ಸುಳ್ಳು ಸಾಕ್ಷ್ಯ ಹೇಳಲು ಮಗಳು ನಿರಾಕರಿಸಿದ್ದರಿಂದ ಕೋಪಗೊಂಡ ಪೋಷಕರು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತ ದೇಹವನ್ನು ಗ್ರಾಮದ ಹೊರವಲಯದ ನದಿಗೆ ಎಸೆದಿದ್ದಾರೆ,'' ಎಂದು ಮುಜಾಫರ್‌ನಗರ ಎಸ್ ಪಿ ಸಂಜೀವ್ ಸುಮನ್ ತಿಳಿಸಿದ್ದಾರೆ.

''ಪ್ರಕರಣ ಸಂಬಂಧ ಮೃತ ಯುವತಿಯ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ. ತಮ್ಮ ಕೃತ್ಯವನ್ನು ಒಪ್ಪಿಕೊಂಡಿರುವ ಪೋಷಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article