-->
1000938341
ಹರಹರ ಶಂಭೋ ಗೀತೆ ಹಾಡನ್ನು ಹಾಡಿ ಪ್ರಖ್ಯಾತರಾದ ಫರ್ಮಾನಿ ನಾಜ್ ಸಹೋದರ ಬರ್ಬರ ಹತ್ಯೆ

ಹರಹರ ಶಂಭೋ ಗೀತೆ ಹಾಡನ್ನು ಹಾಡಿ ಪ್ರಖ್ಯಾತರಾದ ಫರ್ಮಾನಿ ನಾಜ್ ಸಹೋದರ ಬರ್ಬರ ಹತ್ಯೆ

ಲಖನೌ: ಹರ ಹರ ಶಂಭು ಗೀತೆಯನ್ನು ಸುಮಧುರವಾಗಿ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಗಮನಸೆಳೆದಿರುವ ಉತ್ತರಪ್ರದೇಶದ ಖ್ಯಾತ ಯೂಟ್ಯೂಬ್​ ಗಾಯಕಿ ಫರ್ಮಾನಿ ನಾಜ್​ ಸೋದರ‌ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಖುರ್ಷಿದ್​ (18) ಹತ್ಯೆಯಾದ ನಾಜ್​ ಸಹೋದರ. ಈ ದುರ್ಘಟನೆ ಮುಜಾಫರ್​ನಗರದ ಮೊಹಮ್ಮದ್​ಪುರ ಮಾಫಿ ಗ್ರಾಮದಲ್ಲಿ ನಡೆದಿದೆ. ಖುರ್ಷಿದ್​, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್ ರನ್ನು ಸುತ್ತುವರಿದು ಮಾರಕಾಯುಧವನ್ನು ತೋರಿಸಿದ್ದಾರೆ. ಖುರ್ಷಿದ್​ ವಿರುದ್ಧ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಆತನಿಗೆ ಚಾಕುವಿನಿಂದ ಇರಿದ ಬಳಿಕ ಆ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ. ತಕ್ಷಣ​ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಈ ಘಟನೆ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ.


Ads on article

Advertise in articles 1

advertising articles 2

Advertise under the article