ರತನ್ ಉತ್ತರಾಧಿಕಾರಿ ಸ್ಥಾನಕ್ಕೆ ಮಾಯಾ ಟಾಟಾ ( MAYA TATA) ?
Thursday, August 24, 2023
ಮುಂಬಯಿ: ಟಾಟಾ ಗ್ರೂಪ್ ( TATA GROUP) ಮುಖ್ಯಸ್ಥ ರತನ್ ಟಾಟಾ ( RATAN TATA) ಅವರ ಉತ್ತರಾಧಿಕಾರಿಯಾಗಿ ಮಾಯಾ ಟಾಟಾ (MAYA TATA) ನೇಮಕಗೊಳ್ಳುವ ಸಾಧ್ಯತೆ ಇದೆ. ಆ.29ರಂದು ನಡೆಯಲಿರುವ ಟಾಟಾ ಸಮೂಹದ ವಾರ್ಷಿಕ ಮಹಾಸಭೆಯಲ್ಲಿ ಮಾಯಾ ಹೆಸರು ಘೋಷಣೆ ಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ರತನ್ ಟಾಟಾ ( RATHAN TATA) ಅವರ ಮಲಸೋದರ ನಿಯೋಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿಯಾಗಿರುವ 34 ವರ್ಷದ ಮಾಯಾ ಟಾಟಾ, ಇತ್ತೀಚೆಗಷ್ಟೇ ಟಾಟಾ ಮೆಡಿಕಲ್ ಸೆಂಟರ್‌ಟ್ರಸ್ಟ್‌ನ ಆಡಳಿತ ಮಂಡಳಿ ಸೇರಿದ್ದರು.
ಸಾರ್ವಜನಿಕವಾಗಿ ಅಷ್ಟೇನೂ ಕಾಣಿಸಿಕೊಳ್ಳದ ಮಾಯಾ ಅವರು, ಇತ್ತೀಚೆಗೆ ನಿಧನರಾದ ಟಾಟಾ ಸಮೂಹದ ( TATA GROUP) ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರ ಸಹೋದರಿ, ಟಾಟಾ ಗ್ರೂಪ್ 20.71 ಲಕ್ಷ ಕೋಟಿ ರೂ. ಮೌಲ್ಯವನ್ನು ಹೊಂದಿದೆ. ಈ ಬೃಹತ್ ಕಂಪನಿಯ ಉತ್ತರಾಧಿಕಾರಿ ಯಾರೆಂಬ ಕುತೂಹಲ ಎಲ್ಲರಲ್ಲಿದೆ.